ವರದಿಗಾರ ಡೆಸ್ಕ್: ಇನ್ನು ಮುಂದೆ ರಾಷ್ಟ್ರದ ರಾಜಧಾನಿ ಜಂತರ್ ಮಂತರ್ ನಲ್ಲಿ ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶ ಕಲ್ಪಿಸದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ದಿಲ್ಲಿ ಸರಕಾರಕ್ಕೆ ಸೂಚನೆ ನೀಡಿದೆ.
ಜಂತರ್ ಮಂತರ್ ಪ್ರದೇಶದಲ್ಲಿ ಅಳವಡಿಸಲಾಗಿರುವ ಧ್ವನಿವರ್ದಕ, ತಾತ್ಕಾಲಿಕ ವೇದಿಕೆ ಮತ್ತು ಪ್ರತಿಭಟನಾ ಸ್ಥಳವನ್ನು ತಕ್ಷಣ ತೆರವುಗೊಳಿಸುವಂತೆ ಮತ್ತು ಧ್ವನಿವರ್ಧಕ ಬಳಸಿ ನಡೆಸುವ ಭಾಷಣ ಇತ್ಯಾದಿ ಚಟುವಟಿಕೆಗಳಿಗೆ ತಕ್ಷಣವೇ ತಡೆ ನೀಡುವಂತೆ ದೆಹಲಿ ಸರಕಾರ, ದೆಹಲಿ ಪೊಲೀಸ್ ಆಯುಕ್ತರಿಗೆ ಮತ್ತು ದೆಹಲಿ ಮಹಾನಗರ ಪಾಲಿಕೆಗೆ ನ್ಯಾಯಮೂರ್ತಿ ಆರ್.ಎಸ್. ರಾಥೋರ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
