ವರದಿಗಾರ ಡೆಸ್ಕ್: ಶಾಲೆಯ ಸಮೀಪ ಇಬ್ಬರು ಹದಿಹರೆಯದ ಬಾಲಕಿಯರ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಭೀಕರ ಘಟನೆ ಜಾರ್ಖಂಡ್ ಪಾಲಮಾನ್ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಮೂವರು ಕಾಮುಕರು ಮನೆಯೊಳಗೆ ನುಗ್ಗಿ ಬಲವಂತವಾಗಿ ಬಾಲಕಿಯರನ್ನು ಸಮೀಪದ ಶಾಲೆಯೊಂದರ ಬಳಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿರ ಪೈಕಿ ಒಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಬಾಲಕಿ ಕಾಮುಕರನ್ನು ಗುರುತಿಸಿದ್ದು, ತನಿಖೆ ಸಂದರ್ಭ ಹೆಸರನ್ನು ತಿಳಿಸಿದ್ದಾರೆ. ಕಾಮುಕರು ಘಟನೆ ಸಂದರ್ಭ ಪಾನಮತ್ತರಾಗಿದ್ದಾರೆಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಮತ್ತು ಇದುವರೆಗೂ ಅತ್ಯಾಚಾರಿಗಳನ್ನು ಬಂಧಿಸಿಲ್ಲವೆಂದು ಮೂಲಗಳು ವರದಿ ಮಾಡಿವ.
