ವರದಿಗಾರ : ನವರಾತ್ರಿ ಕಳೆಯಿತು. ಇನ್ನೇನು ವಿವಾಹಗಳ ಋತು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೀವು ಮದುವೆ ಸಮಾರಂಭಕ್ಕಾಗಿ ತಯಾರಿ ನಡೆಸುತ್ತಿರುವವರ ಕಿಸೆಗೆ ಹೆಚ್ಚಿನ ಹೊರೆ ಬೀಳಲಿದೆ. ಆಗಸ್ಟ್ 1 ರಿಂದ ಸರಕಾರ ಮದುವೆ ಡೇರೆ ಮತ್ತು ಮದುವೆ ಸಮಯದ ಮಿಠಾಯಿ, ಎರಡೂ ಸೇವೆಗಳ ಮೇಲೆ ಸರಕು ಮತ್ತು ಸೇವೆಗಳ ತೆರಿಗೆಯನ್ನು (GST) ವಿಧಿಸಿದೆ. 18% ಹೆಚ್ಚಿನ ಹೊರೆ ಮದುವೆಗಾಗಿ ತಯಾರಿ ನಡೆಸುತ್ತಿರುವವರು ಹೊರಬೇಕಾಗಿದೆ.
ಈ ಮದುವೆ ಡೇರೆ ಉದ್ಯಮಿಗಳ ಪ್ರಕಾರ ಹಿಂದೆಲ್ಲಾ ವಾರ್ಷಿಕ 6% ಸಂಯೋಜನಾತ್ಮಕವಾದಂತಹ ವ್ಯಾಟ್ ತೆರಿಗೆ ನೀಡಬೇಕಾಗುತ್ತಿತ್ತು. ನಮ್ಮಲ್ಲಿ 5 ಲಕ್ಷ ಮೊತ್ತದ ಸರಕುಗಳಿದ್ದರೆ ಅದಕ್ಕೆ ಸುಮಾರು 15 ಸಾವಿರ ರೂಪಾಯಿಗಳಷ್ಟು ವ್ಯಾಟ್ ನೀಡಬೇಕಾಗುತ್ತಿತ್ತು. ಅದನ್ನು ನಾವೇ ಭರಿಸುತ್ತಿದ್ದೆವು. ಈಗ ಜನರು ಅಧಿಕೃತ ಬಿಲ್ಲುಗಳನ್ನು ಪಡೆಯುತ್ತಿಲ್ಲವಾದ್ದರಿಂದ ಎಲ್ಲಾ ಕಡೆಗಳಲ್ಲಿ ಕಚ್ಚಾ ಬಿಲ್ ಚಾಲ್ತಿಯಲ್ಲಿದೆ ಎಂದು ಉದ್ಯಮಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಉತ್ತರ ಪ್ರದೇಶ ಡೇರೆ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅರುಣ್ ಶರ್ಮಾ ಹೇಳುವ ಪ್ರಕಾರ, ಇದು ವರೆಗೂ ನಮ್ಮ ವ್ಯಾಪಾರವು ಕಚ್ಚಾ ಬಿಲ್ಲುಗಳ ಮೂಲಕವೇ ನಡೆಯುತ್ತಿತ್ತು. ಆದರೆ ನಮ್ಮ ಸಾಲಗಳ ಮರು ವಸೂಲಾತಿ ಖಾತರಿಗಾಗಿ ನಾವು ಅಧಿಕೃತ ಬಿಲ್ಲುಗಳನ್ನು ನೀಡಲೇಬೇಕಾಗುತ್ತದೆ. ಆಗ ನಾವು ಕೊಡುವ ಸರಕುಗಳ ಎಲ್ಲಾ ತೆರಿಗೆಗಳು ಜನರ ಮೇಲೆ ಪರಿಣಾಮ ಬೀರುತ್ತದೆ. ಸರಕಾರ ಈ ತೆರಿಗೆ ನಿಯಮವನ್ನು ಟೆಂಟ್ ವ್ಯಾಪಾರದಿಂದ ಮುಕ್ತಗೊಳಿಸಬೇಕಾಗಿದೆ ಎಂದವರು ಆಗ್ರಹಿಸುತ್ತಾರೆ.
