ರಾಷ್ಟ್ರೀಯ ಸುದ್ದಿ

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಕೂಡಾ ಮಯನ್ಮಾರ್ ವಲಸಿಗ !!

ವರದಿಗಾರ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೋಹಿಂಗ್ಯಾ ನಿರಾಶ್ರಿತರನ್ನು ದೇಶದ ಭದ್ರತೆಯ ನೆಪವೊಡ್ಡಿ ಹೊರ ಹಾಕಲು ಪ್ರಯತ್ನಿಸುತ್ತಿದ್ದು, ಇದರ ಭಾಗವಾಗಿ ಸುಪ್ರೀಂ ಕೋರ್ಟಿನಲ್ಲಿ ತನ್ನ ಅಫಿದವಿತ್ತನ್ನು ಕೂಡಾ ಸಲ್ಲಿಸಿದೆ. ಅದರ ವಿಚಾರಣೆ ನಡೆಯುತ್ತಿದೆ.  ಈ ಮಧ್ಯೆ ಟಿವಿ ಚಾನೆಲ್ ಒಂದರ ಪ್ರಕಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಕೂಡಾ ಬರ್ಮಾ ನಿರಾಶ್ರಿತ ವಲಸಿಗರಾಗಿದ್ದಾರೆ. ಅವರು 1956 ರಲ್ಲಿ ಬರ್ಮಾದಿಂದ ಭಾರತಕ್ಕೆ ವಲಸೆ ಬಂದವರಾಗಿದ್ದಾರೆ.

ಕಳೆದ ವರ್ಷ ಆಗಸ್ಟ್’ನಲ್ಲಿ ಗುಜರಾತ್  ರಾಜ್ಯ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದ ಪಟೇಲ್ ಸಮುದಾಯದ ಯುವ ಹೋರಾಟಗಾರ ಹಾರ್ದಿಕ್ ಪಟೇಲ್ ಕೂಡಾ ‘ಬಿಜೆಪಿ ರಾಜ್ಯಕ್ಕೆ  ಓರ್ವ ವಿದೇಶಿ ಮುಖ್ಯಮಂತ್ರಿಯನ್ನು ನೀಡಿದೆ’ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ 1956 ರ ಆಗಸ್ಟ್ 2 ರಂದು ಮ್ಯಾನ್ಮಾರ್ ರಾಜಧಾನಿ ರಂಗೂನ್’ನಲ್ಲಿ (ಈಗಿನ  ಯಾಂಗೊನ್) ಜನಿಸಿದರು. ಈ ಮಾಹಿತಿಯನ್ನು ವಿಜಯ್ ರುಪಾನಿಯವರ ವೆಬ್ ಸೈಟ್ www.vijayrupani.in  ನಿಂದ ಪಡೆಯಲಾಗಿದೆ. ವೆಬ್ ಸೈಟ್ ಮಾಹಿತಿಯ ಪ್ರಕಾರ, ಅವರ ಕುಟುಂಬವು ಬರ್ಮಾದಿಂದ 1960 ರಲ್ಲಿ ಉತ್ತಮ ಜೀವನ ನಿರ್ವಹಣೆಗಾಗಿ ಭಾರತಕ್ಕೆ ಸ್ಥಳಾಂತರಗೊಂಡಿತು.

 

ನಮಗೆಲ್ಲಾ ತಿಳಿದಂತೆ 1962ರಲ್ಲಿ ಬರ್ಮಾದಲ್ಲಿ ಮಿಲಿಟರಿ ದಂಗೆ ನಡೆಯಿತು. ಆಗ 3 ಲಕ್ಷಕ್ಕೂ ಮಿಕ್ಕಿ ಭಾರತೀಯರು ಬರ್ಮಾ ತೊರೆದು ಭಾರತಕ್ಕೆ ವಲಸೆ ಬಂದಿದ್ದರು. ಆಗ ಬರ್ಮಾದಲ್ಲಿ ನೆಲೆಗೊಂಡಿದ್ದ ಹಲವಾರು ಉದ್ಯಮಿಗಳೂ ಭಾರತಕ್ಕೆ ಬಂದಿದ್ದರು. ವರದಿಗಳ ಪ್ರಕಾರ ಕಳೆದ ಇಪ್ಪತ್ತು ವರ್ಷಗಳಿಂದ ಭಾರತಕ್ಕೆ ವಲಸೆ ಬಂದಿರುವ 40000 ಕ್ಕೂ ಮಿಕ್ಕಿ ರೋಹಿಂಗ್ಯನ್ನರಿದ್ದಾರೆ. ಕಳೆದ ಆಗಸ್ಟ್’ನಿಂದ ಇದುವರೆಗೂ 5 ಮಿಲಿಯನ್ ರೋಹಿಂಗ್ಯನ್ ನಿರಾಶ್ರಿತರು ಬಾಂಗ್ಲಾದೇಶದಲ್ಲಿ ನೆಲೆಸಿದ್ದಾರೆ. ವಿಶ್ವಸಂಸ್ಥೆಯ ಅಧಿಕಾರಿಗಳು ಇದನ್ನು ‘ಜನಾಂಗೀಯ ಶುದ್ಧೀಕರಣ’ ಎಂದು ಟೀಕಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group