ಸುತ್ತ-ಮುತ್ತ

ಕತಾರ್ ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ಘಟಕದ ವತಿಯಿಂದ ‘ಜನ ಜಾಗೃತಿ’ ಅಭಿಯಾನ

ವರದಿಗಾರ :  ಅನಿವಾಸಿ ಭಾರತೀಯ ಸಂಘಟನೆಯಾದ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ಘಟಕದ ವತಿಯಿಂದ “ಹಿಂಸಾಹತ್ಯೆಯನ್ನು ಖಂಡಿಸೋಣ” , “ನಮ್ಮ ಕಾಲ್ನಡಿಗೆ ಜನರ ಬಳಿಗೆ” ಎಂಬ ಧ್ಯೇಯದೊಂದಿಗೆ, ಜನ ಜಾಗೃತಿ ಅಭಿಯಾನವು, ಸುಮಾರು ಒಂದು ತಿಂಗಳ ಕಾಲ, ಕತಾರಿನ ವಿವಿಧ ಪ್ರದೇಶಗಳಲ್ಲಿ ನಡೆಯಿತು.
ಪ್ರಸ್ತುತ ಇಂಡಿಯಾದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಹಲ್ಲೆಗಳು, ಅಲ್ಪಸಂಖ್ಯಾತರನ್ನು ಮತ್ತು ದಲಿತರನ್ನು ಗುರಿಯಾಗಿಸಿ ಬಹಳ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾರಣಹೋಮಗಳು, ಆಹಾರ, ವಸ್ತ್ರಸಂಹಿತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ ಫ್ಯಾಸಿಸ್ಟರ ವ್ಯವಸ್ಥಿತ ಷಡ್ಯಂತರದ ಬಗ್ಗೆ ಅನಿವಾಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.
ಲವ್ ಜಿಹಾದ್, ಭೇಟಿ ಬಚಾವೋ, ತ್ರಿವಳಿ ತಲಾಕ್ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಜನಸಾಮಾನ್ಯರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಿ, ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ ಕೋಮುವಾದಿಗಳ ಅಜೇಂಡಾಗಳ ಬಗ್ಗೆ ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ವಿವರಿಸಲಾಯಿತು.
ದೇಶದಲ್ಲಿ ಪ್ರಗತಿಪರರನ್ನು, ವಿಚಾರವಾದಿಗಳನ್ನು, ಸಾಹಿತಿಗಳನ್ನು, ವೈಚಾರಿಕ ಪ್ರತಿಪಾದಕರನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಭಯಪಡಿಸಲು ಅವರ ಕಗ್ಗೊಲೆ ಮಾಡುವುದನ್ನು ಖಂಡಿಸಿ, ಈ ಘಟನೆಗಳ ವಿರುದ್ಧ ಇಂದಿನ ಪರಿಸ್ಥಿತಿಯಲ್ಲಿ , ಜನಸಾಮಾನ್ಯರು ಒಂದಾಗಿ ಹೋರಾಟವನ್ನು ನಡೆಸುವ ಅಗತ್ಯತೆ  ಮತ್ತು ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಇರ್ಷಾದ್ ಕುಳಾಯಿ, ಫಾರೂಕ್ ಮುಡಿಪ್ಪು, ಅಬು ಸಾಲಿ, ನಜ್ಹೀರ್ ಕೆ. ಸಿ. ರೋಡ್ ಮತ್ತು ಬಷೀರ್ ಮಾಚಂಪಾಡಿ ವಹಿಸಿಕೊಂಡಿದ್ದರು. ನಿರ್ವಹಣಾ ತಂಡದ ಮೇಲ್ವಿಚಾರಣೆ ಮತ್ತು ನೇತೃತ್ವವನ್ನು ಝಮೀರ್ ಹಳೆಯಂಗಡಿ ಮತ್ತು ಖಲಂದರ್ ಜಲಸೂರ್ ನೆರವೇರಿಸಿದರು.
ಒಂದು ತಿಂಗಳ ಕಾಲ ನಡೆದ ಅಭಿಯಾನದಲ್ಲಿ ಮುಖ್ಯ ಭಾಷಣಕಾರರಾಗಿ ಅಬ್ದುಲ್ ಲತೀಫ್ ಮಡಕೇರಿ, ಅನ್ವರ್ ಸಾದಾತ್ ಬಜತ್ತೂರ್ ಮತ್ತು ಹಮೀದ್ ಸವಣೂರ್ ಭಾಗವಹಿಸಿದ್ದರು.
ವರದಿ : ಖಲಂದರ್ ಜಾಲ್ಸೂರ್
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group