ವರದಿಗಾರ-ಲಂಡನ್: ಕೋಟ್ಯಾಂತರ ರೂಪಾಯಿ ಸಾಲ ಮರುಪಾವತಿ ಮಾಡದೆ ಬ್ರಿಟನ್ಗೆ ತೆರಳಿದ್ದ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದು, ಬಂಧನಕ್ಕೊಳಗಾಗಿರುವ ಮಲ್ಯ ಕೆಲವೇ ಕ್ಷಣಗಳಲ್ಲಿ ಜಾಮೀನಿಂದ ಬಿಡುಗಡೆಗೊಂಡಿದ್ದಾರೆ.
ಸಾಲ ಮರುಪಾವತಿ ಮಾಡದ ಆರೋಪಕ್ಕೆ ಸಂಬಂಧಿಸಿ ಇಲ್ಲಿ ಬಂಧನಕ್ಕೊಳಗಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಜಾಮೀನು ದೊರೆತಿದೆ. ಇದರೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಎರಡನೇ ಬಾರಿಗೆ ಅವರು ಬಿಡುಗಡೆಯಾದಂತಾಗಿದೆ.
ಈ ಹಿಂದೆ, ಏಪ್ರಿಲ್ನಲ್ಲಿ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಿದ್ದರು. ಆಗಲೂ ಅವರಿಗೆ ತಕ್ಷಣವೇ ಜಾಮೀನು ದೊರೆತಿತ್ತು.
https://www.ndtv.com/video/news/news/vijay-mallya-arrested-in-uk-in-money-laundering-case-gets-bail-469156
