ರಾಷ್ಟ್ರೀಯ ಸುದ್ದಿ

ಗುಜರಾತಿನಲ್ಲಿ ನಡೆಯುತ್ತಿದೆ ಹೀಗೊಂದು ಅಭಿಯಾನ !

► ಮೀಸೆ ತಿರುವಿ ಸೆಲ್ಫೀ ಫೋಟೋ !

► ಅಭಿಯಾನದ ನಡುವೆಯೇ ಮತ್ತೋರ್ವ ದಲಿತ ಯುವಕನಿಗೆ ಥಳಿತ!

ವರದಿಗಾರ ಡೆಸ್ಕ್ : ಗುಜರಾತಿನ ಲಿಂಬೋದರಾ ಗ್ರಾಮದ ಪಿಯೂಶ್ ಪರ್ಮಾರ್ ಎನ್ನುವ ಯುವಕ ತಿರುವಿದ ಮೀಸೆ ಬೆಳೆಸಿದ ಕಾರಣಕ್ಕೆ ಮೇಲ್ಜಾತಿಯ ಯುವಕರಿಂದ ಹಲ್ಲೆಯಲ್ಪಟ್ಟ ನಂತರ ಅಹ್ಮದಾಬಾದ್ ಮತ್ತು ಗಾಂಧಿನಗರ ದಲಿತ ಯುವಕರು ಸಾಮಾಜಿಕ ತಾಣಗಳಲ್ಲಿ ಹೊಸತೊಂದು ಅಭಿಯಾನವನ್ನು ಶುರು ಮಾಡಿದ್ದಾರೆ. ಯುವಕರು ತಮ್ಮ ತಿರುವಿದ ಮೀಸೆಯ ಸೆಲ್ಫೀ ತೆಗೆದು ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಮಾಡಿ ಪಿಯೂಶ್ ಪರ್ಮಾರ್ ಪರ ನಾವಿದ್ದೇವೆ ಮತ್ತು ಮೀಸೆ ಬೆಳೆಸುವುದು ಒಂದು ಸಂವಿಧಾನಬದ್ಧವಾದ ಹಕ್ಕೆಂದು ಸಾರುತ್ತಿದ್ದಾರೆ. ಹಲವು ಟ್ರೆಂಡಿಂಗ್ ಹಾಶ್ ಟ್ಯಾಗ್’ಗಳ ಮೂಲಕ ನಡೆಯುತ್ತಿರುವ ಈ ಅಭಿಯಾನಕ್ಕೆ ದಲಿತ ಯುವಕರಿಂದ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗುತ್ತಿವೆ. ಒಟ್ಟಾರೆ ಅಸಮಾನತೆಯ ನೋವು ಯುವಕರನ್ನು ಹೊಸತೊಂದು ಮಜಲಿಗೆ ಕೊಂಡೊಯ್ಯುತ್ತಿದೆ ಎಂದರೂ ತಪ್ಪಾಗಲಾರದು.

ಆದರೆ ಅಭಿಯಾನ ನಡೆಯುತ್ತಿರುವ ನಡುವೆಯೇ ಇನ್ನೋರ್ವ ದಲಿತ ಯುವಕನಿಗೆ ಇದೇ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ. ಕ್ರುನಾಲ್ ಮಹೇರಿಯಾ ಅನ್ನುವ ಯುವಕನಿಗೆ ಗಾಂಧಿನಗರದಲ್ಲಿ ಮೀಸೆ ತಿರುವಿದ ಕಾರಣಕ್ಕಾಗಿ ಥಳಿಸಲಾಗಿದೆ. ಮನೀಶ್ ಮಂಜುಳಾಬೆನ್ ಎನ್ನುವ ಯುವಕ ತನ್ನ ತಿರುವಿದ ಮೀಸೆಯ ಫೋಟೋ ಹಾಕಿ, ”ಜಾತಿ ಪದ್ಧತಿ ನನಗೆ ಮೀಸೆ ಬೆಳೆಸಲೂ ಅವಕಾಶ ನೀಡುತ್ತಿಲ್ಲ, ಆದರೆ ನನ್ನ ದೇಶದ ಸಂವಿಧಾನ ನನಗೆ ಅದಕ್ಕೆ ಅವಕಾಶ ನೀಡಿದೆ. ಹೀಗಿರುವಾಗ ನನ್ನ ಬೆಂಬಲ ಜಾತಿ ಪದ್ಧತಿ ನಿರ್ಮೂಲನೆಗೊಳ್ಳುವ ಭಾರತಕ್ಕಾಗಿದೆ’ ಎಂದು ಪೋಸ್ಟ್ ಮಾಡಿದ್ದಾನೆ.

ಗೌರಂಗ್ ಜೈನಿ ಜೈನಿ ಎನ್ನುವ ಸಾಮಾಜಿಕ ಕಾರ್ಯಕರ್ತ, ಈ ರೀತಿಯ ಅಭಿಯಾನಗಳು ಸಾಮಾಜಿಕ ತಾಣಗಳಲ್ಲಿ ಅತಿ ಮುಖ್ಯವಾಗಿದೆ. ಇದು ಇತರೆ ಧರ್ಮೀಯ ಯುವಕರಿಗೆ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ತಿಳುವಳಿಕೆ ಮೂಡಿಸುತ್ತದೆ. ದಲಿತರು ಮೀಸೆ ಬೆಳೆಸಿಕೊಳ್ಳಬಾರದು, ಮೋಟಾರ್ ಬೈಕ್ ಚಲಾಯಿಸಬಾರದು, ಮದುವೆ ಸಮಾರಂಭಗಳಲ್ಲಿ ಮದುಮಗ ಕುದುರೆ ಮೇಲೆ ಕುಳಿತುಕೊಳ್ಳಬಾರದೆಂಬ ಅಲಿಖಿತ ನಿಯಮಗಳು ಕೆಲವೊಂದು ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ. ಈ ಕುರಿತು ಜನರು ಧ್ವನಿ ಎತ್ತಬೇಕಾಗಿದೆ ಎಂದು ಹೇಳುತ್ತಾರೆ.

ಸತ್ತ ದನದ ಚರ್ಮ ಸುಲಿದರೆಂದು ಆರೋಪಿಸಿ ಕಳೆದ ವರ್ಷ ಊನಾದಲ್ಲಿ ದಲಿತ ಯುವಕರ ಮೇಲೆ ದಾಳಿ ನಡೆಸಿದ ಘಟನೆ ಐತಿಹಾಸಿಕ ‘ಊನಾ ಚಳವಳಿ’ಗೆ ಕಾರಣವಾಗಿತ್ತು. ಆ ನಂತರ ರಾಜ್ಯದ ದಲಿತರು ಸಂಘಟಿತರಾಗಿದ್ದು, ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಹೊರ ಜಗತ್ತಿಗೆ ತೋರಿಸುವ ಪ್ರಯತ್ನ ಬಹಳ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎನ್ನುವುದೊಂದು ಆರೋಗ್ಯಕರ ಬೆಳವಣಿಗೆಯಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group