ರಾಷ್ಟ್ರೀಯ ಸುದ್ದಿ

ಚುನಾವಣಾ ಪ್ರಚಾರ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಬಳಸಿದ ಬಿಜೆಪಿ ಸಚಿವ

ವರದಿಗಾರ-ಅಹ್ಮದಾಬಾದ್: ಗುಜರಾತ್ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಸಚಿವರೊಬ್ಬರು ಸ್ಥಳೀಯ ಶಾಲೆಯ ಮಕ್ಕಳನ್ನು ಬಿಜೆಪಿ ಪಕ್ಷದ ಕಿಟ್ ತುಂಬಿಸಲು ಬಳಸಿದ್ದಾರೆ ಎಂದು ಹೇಳಲಾಗಿರುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಡಿಸೆಂಬರ್ ನಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಿರುಸಿನ ತಯಾರಿ ನಡೆಸುತ್ತಿದೆ. ಈ ಪೂರ್ವ ತಯಾರಿಯಲ್ಲಿ ಬಿಜೆಪಿಯ ಗುಜರಾತ್ ಸಾರಿಗೆ ಮಂತ್ರಿಯಾಗಿರುವ ವಲ್ಲಭ್ ಕಾಕಡಿಯಾರವರು ಒಂದು ಹೆಜ್ಜೆ ಮುಂದೆ ಹೋಗುತ್ತಾ, ಬಾಪು ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸ್ಥಳೀಯ ವಿಧ್ಯಾನಿಕೇತನ್ ಶಾಲೆಯ ವಿದ್ಯಾರ್ಥಿಗಳಿಂದ ಚುನಾವಣಾ ಕಿಟ್ ತುಂಬಿಸಿ ಭಾರಿ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಆಟ ಪಾಠ ಬಿಟ್ಟು ಬಿಜೆಪಿಗಾಗಿ ಕೆಲಸ ಮಾಡಿ ಎಂಬಂತೆ ಶಾಲಾ ವಿದ್ಯಾರ್ಥಿಗಳನ್ನು, ಅವರ ಪಾಠದ ಸಮಯದಲ್ಲೇ ಸಮವಸ್ತ್ರ ಧರಿಸಿ ಬಿಜೆಪಿಯ ಚುನಾವಣಾ ಕಾರ್ಯಕ್ಕೆ ಬಳಸುತ್ತಿರುವ ಬಿಜೆಪಿಯ ವಲ್ಲಭ್ ಕಾಕಡಿಯಾರವರ ಈ ವರ್ತನೆಯು “ಪಡೇಗ ಇಂಡಿಯಾ, ತಬೀ ತೋ ಬಡೇಗ ಇಂಡಿಯಾ” ಎಂಬ ಬಿಜೆಪಿಯ ಘೋಷಣೆಯ ಮಾನವನ್ನು ಹರಾಜು ಹಾಕಿದೆ. ಈ ವಿಡಿಯೊ ಯಾರು ಮಾಡಿದ್ದರು ಎಂಬುದು ತಿಳಿದು ಬಂದಿಲ್ಲ ಆದರೆ ಭಾರೀ ಕೋಲಾಹಲವಂತೂ ಎಬ್ಬಿಸಿದೆ. ಚುನಾವಣೆಯ ಸಮಯದಲ್ಲಿ ಈ ವಿಡಿಯೋ ಕಾಂಗ್ರೆಸ್ ಪಾಲಿಗೆ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಲು ಅವಕಾಶ ಮಾಡಿ ಕೊಟ್ಟಂತಿದೆ.

ಈ ಬಗ್ಗೆ ಸಾರಿಗೆ ಸಚಿವ ವಲ್ಲಭ್ ಕಾಕಡಿಯಾರವರು ಪ್ರತಿಕ್ರಿಯಿಸುತ್ತಾ “ಈ ವಿಡಿಯೋ ಎಲ್ಲಿಯದ್ದು ಹಾಗೂ ಯಾರು ಮಾಡಿದ್ದಾರೆಂದು ತಿಳಿದಿಲ್ಲ. ಇದು ನನ್ನ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರವಾಗಿದೆ. ಈ ಬಗ್ಗೆ ಕೂಲಂಕೂಷ ತನಿಕೆ ನಡೆಸಲಾಗುವುದು” ಎಂದು ಹೇಳುತ್ತಾ ತಿಪ್ಪೆ ಸಾರಿದ್ದಾರೆ.

ವಿಡಿಯೋ ನೋಡಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group