ವರದಿಗಾರ-ಮುಂಬೈ: ಬಿಜೆಪಿಗರೆ ನಮಗೆ ದೇಶ ಭಕ್ತಿಯ ಪಾಠ ಮಾಡಲು ಬರಬೇಡಿ. ದೇಶ ಭಕ್ತಿಯ ಪಾಠ ಹೇಳಿಸಿಕೊಳ್ಳುವಂತಹ ದಿನ ನಮಗಿನ್ನೂ ಬಂದಿಲ್ಲ ಎಂದು ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕಟು ಮಾತುಗಳಲ್ಲಿ ಎಚ್ಚರಿಸಿದ್ದಾರೆ.
ಶಿವಾಜಿ ಪಾರ್ಕ್ನಲ್ಲಿ ಭಾನುವಾರ ರಾತ್ರಿ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡ ಮುಖಬೆಲೆಯ ನೋಟು ರದ್ದತಿಯನ್ನು ಬೆಂಬಲಿಸುವವರು ಮಾತ್ರ ದೇಶ ಪ್ರೇಮಿಗಳು. ಬೆಂಬಲಿಸದವರು ದೇಶದ್ರೋಹಿಗಳು ಎಂಬಂಥ ವಾತಾವರಣ ಸೃಷ್ಟಿಸಲಾಗಿದೆ ಎಂದು ಠಾಕ್ರೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಮತ್ತು ಶಿವ ಸೇನಾ ಮಹಾರಾಷ್ಟ್ರ ಮತ್ತು ಕೇಂದ್ರ ಸರಕಾದಲ್ಲಿ ಮಿತ್ರಪಕ್ಷಗಳಾಗಿವೆ.
