ವರದಿಗಾರ-ಉತ್ತರಪ್ರದೇಶ: ಏಳು ವರ್ಷದ ಬಾಲಕಿಯ ಮೇಲೆ ಸ್ವಯಂ ಘೋಷಿತ ದೇವ ಮಾನವ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಬಾರಬಂಕಿ ಜಿಲ್ಲೆಯ ಸತ್ರಿಕ್ ನಿಂದ ವರದಿಯಾಗಿದೆ.
ದೇವ ಮಾನವನ ಹೆಸರಿನಲ್ಲಿ ಅಮಾನವೀಯ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ತಮ್ಮ ಮನೆಗೆ ಊಟಕ್ಕೆ ಕರೆಯಲೆಂದು ಸ್ವಯಂ ಘೋಷಿತ ದೇವ ಮಾನವ ಬಾಬಾ ರಾಮ್ ಕಲಂದರ್ನ ಅಶ್ರಮಕ್ಕೆ ಬಾಲಕಿ ತೆರಳಿದ್ದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
