ರಾಷ್ಟ್ರೀಯ ಸುದ್ದಿ

ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಭಾರತ-ಪಾಕ್ ಯುದ್ಧ ಹಾಗೂ ಹಿಂದು-ಮುಸ್ಲಿಂ ಗಲಭೆಯನ್ನು ಪ್ರಚೋದಿಸಲು ಹಿಂಜರಿಯದು-ರಾಜ್ ಠಾಕ್ರೆ

►ಮೋದಿಯವರ ದ್ವಿಮುಖ ನೀತಿ, ಬಿಜೆಪಿಯ ಚುನಾವಣಾ ತಂತ್ರಕ್ಕೆ ತೀವ್ರ ಟೀಕೆ

►ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದಕ್ಕಾಗಿ ಖೇಧ ವ್ಯಕ್ತಪಡಿಸುತ್ತಿದ್ದೇನೆ ಎಂದ ಠಾಕ್ರೆ

►ಸರಕಾರದ ಹಿಂದಿ ಹೇರಿಕೆಯ ವಿರುದ್ಧ ಹೋರಾಟ ಶ್ಲಾಘನೀಯ

►ತಾನು ಬಿಜೆಪಿಯ ‘ಹಿಂದಿ-ಹಿಂದು-ಹಿಂದುಸ್ಥಾನ್’ ಕನಸಿನ ವಿರೋಧಿ

ವರದಿಗಾರ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸರ್ವೋಚ್ಚ ನಾಯಕ ರಾಜ್ ಠಾಕ್ರೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಬಿಜೆಪಿಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

‘ದಿ ಹಿಂದೂ’ ಪತ್ರಿಕೆಯ ಅಲೋಕ್ ದೇಶಪಾಂಡೆಯವರೊಂದಿಗೆ ನಡೆದ ಸಂದರ್ಶನದಲ್ಲಿ ಹಿಂದಿ ಹೇರಿಕೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದ್ವಿಮುಖ ನೀತಿ, ಚುನಾವಣೆ ಗೆಲ್ಲಲು ಬಿಜೆಪಿ ನಡೆಸುತ್ತಿರುವ ತಂತ್ರಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಭೂಗತ ಪಾತಕಿ ದಾವೂದ್ ಇಬ್ರಾಹೀಂ ಭಾರತಕ್ಕೆ ಹಿಂತಿರುಗಲು ಆಗ್ರಹಿಸುತ್ತಿದ್ದು, ಬಿಜೆಪಿಯು ಇದನ್ನು ತನ್ನ ಚುನಾವಣಾ ಲಾಭಕ್ಕಾಗಿ ಉಪಯೋಗಿಸಲು ದಾವೂದ್ ನೊಂದಿಗೆ ‘ಡೀಲ್’ ನಡೆಸುತ್ತಿದೆ ಎಂದಿದ್ದಾರೆ. ಚುನಾವಣೆಯನ್ನು ಗೆಲ್ಲಲು ಬಿಜೆಪಿಯು ಭಾರತ-ಪಾಕ್ ಯುದ್ಧ ಹಾಗೂ ಹಿಂದೂ-ಮುಸ್ಲಿಂ ನಡುವೆ ಗಲಭೆ ನಡೆಸಲೂ ಹಿಂಜರಿಯದು ಎಂದಿದ್ದಾರೆ.

ತಾನು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಕ್ಕೆ ಖೇದಿಸುತ್ತಿರುವುದಾಗಿ ತಿಳಿಸಿದರು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಬೆಂಬಲಿಸಿದ್ದೆ, ಆದರೆ ಪ್ರಧಾನ ಮಂತ್ರಿಯಾದ ಬಳಿಕ ಅವರು ತನ್ನ ಮೊದಲಿನ ನೀತಿಗಳಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜಿ ಎಸ್ ಟಿ, ಆಧಾರ್ ಕಾರ್ಡ್ ವಿರುದ್ಧ ಪ್ರತಿಭಟಿಸಿದವರು ಇದೀಗ ಜಿ ಎಸ್ ಟಿ ಜಾರಿಗೊಳಿಸಿದ್ದಾರೆ ಹಾಗೂ ಬಲವಂತವಾಗಿ ಆಧಾರ್ ಕಾರ್ಡ್ ಹೇರುತ್ತಿದ್ದಾರೆ ಎನ್ನುವ ಉದಾಹರಣೆಗಳನ್ನೂ ನೀಡಿದ್ದಾರೆ.

ಇನ್ನು ಭ್ರಷ್ಟಾಚಾರ, ಕಪ್ಪು ಹಣ, ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯಕ ಜಾಹೀರಾತುಗಳಿಗೆ ನೀಡಿ ಪೋಲು ಮಾಡುವುದರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ ಠಾಕ್ರೆ, ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟಿಸಿದ್ದನ್ನು ಹೊಗಳಿದರು. ಭಾಷಾ ತಾರತಮ್ಯದ ವಿರುದ್ಧ ಹೋರಾಡಲು ಇತರ ರಾಜ್ಯಗಳ ಸಂಘಟನೆಗಳೊಂದಿಗೆ ಕೈ ಜೋಡಿಸಲೂ ಸಿದ್ಧರಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ತಾನು ಬಿಜೆಪಿಯ ‘ಹಿಂದಿ-ಹಿಂದು-ಹಿಂದುಸ್ಥಾನ್’ ಕನಸಿನ ವಿರೋಧಿಯೆಂದೂ, ಸಂಸ್ಕೃತಿ, ಭಾಷೆಗಳಲ್ಲಿನ ವಿವಿಧತೆಯೇ ನಮ್ಮ ದೇಶದ  ವೈಶಿಷ್ಟತೆ ಎಂದಿದ್ದಾರೆ. ತಮ್ಮ ಯಜಮಾನರ ಹಣಕಾಸಿನ ನಾಡಿಯು ಸರಕಾರದ ಹಿಡಿತದಲ್ಲಿರುವುದರಿಂದ ಪತ್ರಕರ್ತರು ಸರಕಾರವನ್ನು ಪ್ರಶ್ನಿಸುತ್ತಿಲ್ಲ, ಅದ್ಧರಿಂದ ತಾನು ಮಾಧ್ಯಮದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group