ಮಾಹಿತಿ

ಬ್ರಝಿಲಿನ ಹಾವುಗಳ ದ್ವೀಪ: ಜಗತ್ತಿನ ಅತಿ ಭಯಾನಕ ದ್ವೀಪ

Snake Island
ನಮ್ಮಲ್ಲಿ ಹೆಚ್ಚಿನವರು ಓಫಿಡಿಯೋಫೋಬಿಯಾ (ಹಾವುಗಳ ಕುರಿತ ಭಯ) ದಿಂದ ನರಳುವವರಾಗಿದ್ದಾರೆ. ಒಂದು ವೇಳೆ ನೀವು ಆ ಕುರಿತು ಭಯವಿಲ್ಲದವರಾಗಿದ್ದರೂ ಈ ಹಾವುಗಳ ದ್ವೀಪಕ್ಕೆ ಹೋಗುವುದನ್ನು ಇಷ್ಟಪಡಲಾರಿರಿ. ಅಷ್ಟೊಂದು ಭಯಾನಕವಾಗಿದೆ ಈ ದ್ವೀಪ!
ಇಲ್ಹಾ ಡ ಕ್ವಯಿಮಾಡ ಗ್ರಾಂಡೆ ಅಥವಾ ಹಾವುಗಳ ದ್ವೀಪ ಎಂಬ ಹೆಸರಿನಿಂದ ಪ್ರಸಿದ್ಧಿಯಾದ ಈ ದ್ವೀಪ ಬ್ರಝಿಲ್’ನ ನಗರ ಸಾವೋ ಪಾಲೋದಿಂದ 90 ಮೈಲು ದೂರದಲ್ಲಿದೆ. 110 ಎಕ್ರೆ ವಿಸ್ತ್ರೀರ್ಣದಲ್ಲಿರುವ ಈ ದ್ವೀಪದಲ್ಲಿ ಹಲವು ಪ್ರಭೇದಗಳ ಘಾತುಕ ಮತ್ತು ವಿಷಯುಕ್ತ ಹಾವುಗಳು ಕಂಡು ಬರುತ್ತದೆ.  ವಿಜ್ಞಾನಿಗಳ ಅಂದಾಜಿನ ಪ್ರಕಾರ ಇಲ್ಲಿ ಸುಮಾರು 4000 ದಷ್ಟು ಹಾವುಗಳು ವಾಸ ಮಾಡುತ್ತವೆ ಮತ್ತು ಪ್ರತಿ ಐದು ಮೀಟರ್’ಗೊಂದು ಕಂಡು ಬರುತ್ತದೆ
ಈ ದ್ವೀಪ ಜಗತ್ತಿನ ಅತಿ ವಿಷಯುಕ್ತ ಹಾವಾದ “ಈಟಿ ತಲೆ” (Golden Lancehead) ಹಾವುಗಳ ತವರೂರಾಗಿದೆ. ಇದರ ವಿಷ ಅದೆಷ್ಟು ಮಾರಕವೆಂದರೆ ಮನುಷ್ಯರ ಮಾಂಸವನ್ನು ಕರಗಿಸಿಬಿಡಬಲ್ಲ ಶಕ್ತಿ ಇದಕ್ಕಿದೆ. ಇದರ ವಿಷ ಏರಿದ ಮನುಷ್ಯ ಕ್ಷಣಾರ್ಧದಲ್ಲಿ ಸಾವನ್ನಪ್ಪುತ್ತಾನೆ.ಇದರ ವಿಷ ಭೂಖಂಡದ ಇತರೆ ಹಾವುಗಳ ವಿಷಕ್ಕಿಂತ ಮೂರರಿಂದ ಐದು ಪಟ್ಟು ಹೆಚ್ಚಾಗಿರುತ್ತದೆ.
Golden Lancehead
ಬ್ರಝಿಲ್ ಸರ್ಕಾರ ಈ ಹಾವುಗಳ ದ್ವೀಪ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದೆ. ಬ್ರಝಿಲ್’ನ ನೌಕಾ ಸೇನೆ ಈ ದ್ವೀಪದಲ್ಲಿರುವ ಲೈಟ್ ಹೌಸಿನ ನಿರ್ವಹಣೆಗಾಗಿ ವರ್ಷಕ್ಕೊಂದು ಬಾರಿ ಮಾತ್ರ ಪ್ರವೇಶಿಸುತ್ತದೆ.  ಜೀವವಿಜ್ಞಾನ ಪರಿಣತರು ಮತ್ತು ಸಂಶೋಧಕರು ಈ ಈಟಿ ತಲೆ ಹಾವುಗಳ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸರ್ಕಾರದ ವಿಶೇಷ ಅನುಮತಿ ಪತ್ರದೊಂದಿಗೆ ಮತ್ತು ವಿಶೇಷವಾಗಿ ತರಬೇತಿ ಪಡೆದ ವೈದ್ಯಕೀಯ ತಂಡದೊಂದಿಗೆ ಈ ದ್ವೀಪವನ್ನು ಪ್ರವೇಶಿಸುತ್ತಾರೆ.
ಸಾವೋ ಪಾಲೋದ ನಿವಾಸಿಗಳು ಹೇಳುವಂತೆ ಸ್ಥಳೀಯ ಮೀನುಗಾರನೋರ್ವ ಒಮ್ಮೆ ಈ ದ್ವೀಪಕ್ಕೆ ಒಬ್ಬಂಟಿಯಾಗಿ ಹೋಗುವ ಸಾಹಸ ಮಾಡಿ ಹಿಂತಿರುಗಿ ಬರಲೇ ಇಲ್ಲ. ಅಂತರ್ಜಾಲ ತಾಣವೊಂದು ಹೇಳುವಂತೆ ಇಲ್ಲಿ ಮೀಟರಿಗೊಂದರಂತೆ ಕಾಣ ಸಿಗುವ ಭಯಾನಕ ಹಾವುಗಳು ನಿಮ್ಮ ಮರಣವನ್ನು ಮೂರು ಅಡಿಗಿಂತ ಹೆಚ್ಚಿಗೆ ಕೊಂಡು ಹೋಗಲ್ಲವೆಂಬುವುದು ವಾಸ್ತವ. ಇದು ಈ ದ್ವೀಪದ ಭಯಾನಕತೆಗೆ ಹಿಡಿದ ಕೈಗನ್ನಡಿಯಾಗಿದೆ
ವೀಡಿಯೋ ವೀಕ್ಷಿಸಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group