ರಾಷ್ಟ್ರೀಯ ಸುದ್ದಿ

ಒಂದು ಬಾರಿಯಾದರೂ ಮೋದಿ ಆರ್ಥಿಕ ಸಂಕಷ್ಟದ ಕುರಿತಂತೆ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ : ಬಿಜೆಪಿ ಸಂಸದ ಶತ್ರುಘನ್ ಸಿನ್ಹಾ

► ಆರ್ಥಿಕ ಸಂಕಷ್ಟ : ಮೋದಿಯ ಮೇಲೆ ಮುಂದುವರಿದ ಸ್ವಪಕ್ಷೀಯರ ವಾಗ್ದಾಳಿ !

► ಇದು ಯಶವಂತ್ ಸಿನ್ಹಾ ಮತ್ತು ಪಕ್ಷದ ಪ್ರಶ್ನೆಯಲ್ಲ; ದೇಶದ ಉಳಿವಿನ ಪ್ರಶ್ನೆ⁠⁠⁠⁠

ವರದಿಗಾರ ದೆಹಲಿ : ಭಾರತದ ಮಾಜಿ ವಿತ್ತ ಮಂತ್ರಿ ಯಶವಂತ್ ಸಿನ್ಹಾ ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿ ವಿಫಲವಾಗುತ್ತಿರುವ ಕುರಿತು ಟೀಕಿಸಿದ ಬೆನ್ನಲ್ಲೇ ಇನ್ನೋರ್ವ ಬಿಜೆಪಿ ಸಂಸದ ಶತುಘ್ನ ಸಿನ್ಹಾ ಇಂದು ಅದೇ ಧಾಟಿಯಲ್ಲಿ ಮೋದಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮೋದಿ ಒಮ್ಮೆಯಾದರೂ ತನ್ನ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ದೇಶದ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಹೇಳಿದ್ದಾರೆ. ತನ್ನ ಸರಣಿ ಟ್ವೀಟ್’ಗಳಲ್ಲಿ ಯಶವಂತ್ ಸಿನ್ಹಾರನ್ನು ಬೆಂಬಲಿಸಿದರಲ್ಲದೆ, ಮೋದಿ ಸರಕಾರಕ್ಕೆ ಜನರೆದುರು ಬರಲು ಇದು ಸಕಾಲವೆಂದು ಟ್ವೀಟ್ ಮಾಡಿದ್ದಾರೆ.

ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನಮ್ಮದೇ ಪಕ್ಷದವರು ಮತ್ತು ಹೊರಗಿನವರ ಹೇಳಿಕೆಗಳು ಬಲಗೊಳ್ಳುತ್ತಲೇ ಇದೆಯೆಂದಿದ್ದಾರೆ. ದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಚಿಂತಾಜನಕ ಪರಿಸ್ಥಿತಿಯ ಕುರಿತು ಎಲ್ಲಾ ವರ್ಗದ ನಾಯಕರು ಮತ್ತು ಜನರು ದೇಶದ ಧ್ವನಿಯೆತ್ತಲಿದ್ದರೆಂದು ಸಂಸದ ಹೇಳಿದ್ದಾರೆ.

ದೇಶದ ಆರ್ಥಿಕ ಕುಸಿತದ ವಿಷಯವು ಸರಕಾರ ಮತ್ತು ಯಶವಂತ್ ಸಿನ್ಹಾ ನಡುವಿನ ವಿಷಯಕ್ಕೆ ತಗ್ಗಿಸುವಷ್ಟರ ಮಟ್ಟಿಗೆ ದುರ್ಬಲಗೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ. ಮಾಜಿ ನಟ ಎಲ್ಲೂ ಅರುಣ್ ಜೇಟ್ಲಿಯವರ ವಿರುದ್ಧ ಯಶ್ವಂತ್ ಸಿನ್ಹಾಗೆ ಬೆಂಬಲ ನೀಡಲಿಲ್ಲ. ಯಾರಾದರೂ ಈ ಕುರಿತು ಧ್ವನಿಯೆತ್ತಿದವರ ವಿರುದ್ಧ ನಡೆಯುತ್ತಿರುವ ಪರಿಣಾಮಗಳ ಬಗ್ಗೆಯೂ ತನ್ನ ಟ್ವೀಟ್’ನಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಪ್ರಧಾನಿಯವರು ಈಗಲಾದರೂ ಪತ್ರಿಕಾಗೋಷ್ಟಿಯ ಮುಂದೆ ಬಂದು ಜನರ ನೈಜ ಪ್ರಶ್ನೆಗಳಿಗೆ ಉತ್ತರಿಸುವಂತೆ ಮನವಿ ಮಾಡಿದರು. ಈ ಮೂಲಕವಾದರೂ ಅವರು ಮಧ್ಯಮ ವರ್ಗದವರ, ಬಡ ವ್ಯಾಪಾರಿಗಳ, ಸಣ್ಣ ಉದ್ಯಮದಾರರ ಬಗ್ಗೆ ಕಾಳಜಿ ಉಳ್ಳವರೆಂದು ಒಮ್ಮೆಯಾದರೂ ಸಾಬೀತುಪಡಿಸುವಂತೆ ನಾನು ಆಶಿಸುತ್ತೇನೆ. ಮುಂಬರುವ ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟೂಕೊಂಡಾದರೂ ಈ ಕುರಿತೊಮ್ಮೆ ಆಲೋಚಿಸಬೇಕಾಗಿದೆ ಎಂದವರು ಪ್ರಧಾನಿಗೆ ಕಿವಿ ಮಾತು ಹೇಳಿದ್ದಾರೆ.

‘ಬಿಜೆಪಿ-ಎನ್ ಡಿ ಎ ಚಿರಾಯುವಾಗಿರಲಿ, ಜೈ ಬಿಹಾರ್, ಜೈ ಮಹಾರಾಷ್ಟ್ರ, ಜೈ ಗುಜರಾತ್ , ಜೈ ಹಿಂದ್’ ಎನ್ನುತ್ತಾ ತನ್ನ ಸರಣಿ ಟ್ವೀಟ್’ಗಳನ್ನು ಕೊನೆಗೊಳಿಸಿದ್ದಾರೆ.

ಶತ್ರುಘನ್ ಸಿನ್ಹಾ ನಿನ್ನೆ ತನ್ನ ಟ್ವೀಟ್’ನಲ್ಲಿ ಯಶವಂತ್ ಸಿನ್ಹಾ ನೇರ ನುಡಿಯ ನಾಯಕ, ಅವರ ಹೇಳಿಕೆಗಳು ಪಕ್ಷದ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಾಗಿತ್ತು ಎಂದಿದ್ದರು. ಅವರು ತನ್ನ ಪಾಳಿಯಲ್ಲಿ ಯಶಸ್ವಿಯಾಗಿ ಈ ದೇಶದ ವಿತ್ತ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೆಂದು ಕೂಡಾ ಪಾಟ್ನಾ ಸಾಹಿಬ್ ಎಂದೇ ಪ್ರಖ್ಯಾತಿ ಪಡೆದಿರುವ ಶತ್ರುಘನ್ ಸಿನ್ಹಾ ಹೇಳಿದ್ದರು. ಮಾಜಿ ನಟ ಈ ಹಿಂದೆ ತಾನೂ ಕೂಡಾ ಬಿಜೆಪಿ ಕೇಂದ್ರ ನಾಯಕರನ್ನು ಟೀಕಿಸಿ ಸುದ್ದಿಯಾಗಿದ್ದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group