ವರದಿಗಾರ : ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಖ್ಯಾತ ಚಿಂತಕಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ‘ಹಂತಕರನ್ನು ಬಂಧಿಸುವವರೆಗೆ ಪ್ರತಿರೋಧಿಸುತ್ತಲೇ ಇರೋಣ’ ಎಂಬ ಧ್ಯೇಯದಡಿಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ವತಿಯಿಂದ ಅಕ್ಟೋಬರ್ 2 ರಂದು ಬೆಂಗಳೂರಿನ ಕಲಾ ಕ್ಷೇತ್ರದ ‘ಲೇಡೀಸ್ ಲಾಂಜ್’ನಲ್ಲಿ ಸಂಜೆ 5 ಗಂಟೆಗೆ ‘ಕಾವ್ಯ ಪ್ರತಿರೋಧ’ ಕವಿಗೋಷ್ಟಿ ನಡೆಯಲಿದೆ. ಈ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಮೂಡ್ನಾಕೂಡು ಚಿನ್ನಸ್ವಾಮಿಯವರು ವಹಿಸಲಿದ್ದು, ಕೆ ವೈ ನಾರಾಯಣ ಸ್ವಾಮಿ ಆಶಯ ಸಂದೇಶ ನೀಡಲಿದ್ದಾರೆ.
ಈ ಕವಿಗೋಷ್ಟಿಯಲ್ಲಿ ಪ್ರೊ ಎಸ್ ಜಿ ಸಿದ್ಧರಾಮಯ್ಯ, ಕೆ ಷರೀಫಾ/ಹೆಚ್ ಎಲ್ ಪುಷ್ಪಾ, ಸುಬ್ಬು ಹೊಲೆಯಾರ್, ಚಕ್ರವರ್ತಿ ಚಂದ್ರಚೂಡ್, ಹೇಮಲತಾ ಮೂರ್ತಿ, ಚಲಂ ಹಾಡ್ಲಹಳ್ಳಿ, ವಿ ಆರ್ ಕಾರ್ಪೆಂಟರ್, ಮಂಜುನಾಥ್ ಎಸ್, ಶಂಕರ ಕೆಂಚನೂರು, ಸತ್ಯಮಂಗಲ ಮಹದೇವ್, ಪ್ರವರ ಕೊಟ್ಟೂರು, ಅಪ್ಪಗೆರೆ ಲಂಕೇಶ್, ಸ್ಪೂರ್ತಿ ಹರವು, ಬೊಮ್ಮೇಕಲ್ ವೆಂಕಟೇಶ್, ಗುರುಪ್ರಸಾದ್ ಕಂಟಲಗೆರೆ, ಮಂಜುಳಾ ಹುಲಿಕುಂಟೆ, ರುಕ್ಮಿಣಿ ನಾಗಣ್ಣನವರ್, ಮಂಗಳ ಗೌರಿ, ಮುರಳಿ ಮೋಹನ್ ಕಾಟಿ, ಮಂಜು ನಾರಾಯಣ್ ಮತ್ತು ಚಾಂದ್ ಪಾಷಾ ಸೇರಿದಂತೆ ಹಲವು ಕವಿಗಳ ಕವಿತೆ ವಾಚನ ನಡೆಯಲಿದೆ
