ಜಿಲ್ಲಾ ಸುದ್ದಿ

ಶಾಲಾ ಆವರಣಕ್ಕೆ ಮಳೆ ನೀರಿನೊಂದಿಗೆ ಹರಿದು ಬಂದವು ಹಾವು!

ವರದಿ : ರವಿಚಂದ್ರ ಮಲ್ಲೇದ್

ವರದಿಗಾರ ಸಿಂದಗಿ :  ಪಟ್ಣಣದಲ್ಲಿ ಗುರುವಾರ ಮಧ್ಯಾಹ್ನ ಸುರಿದ ರಭಸದ ಮಳೆಗೆ ಕಾಳಿಕಾ ನಗರದ ಸರಕಾರಿ ಶಾಲೆ ಆವರಣಕ್ಕೆ ಹರಿದ ಮಳೆ ನೀರಿನೊಂದಿಗೆ ಎರಡು ಹಾವುಗಳು ಹರಿದು ಬಂದು ಮಳೆ ನೋಡುತ್ತ ನಿಂತಿದ್ದ ಶಾಲಾ ಮಕ್ಕಳಲ್ಲಿ ಕೆಲಕಾಲ ಆತಂಕ ಸೃಷ್ಠಿ ಮಾಡಿದ್ದವು.

ಶಾಲೆಯ ಮುಖ್ಯಗುರು ಸೇರಿದಂತೆ ಸಹ ಶಿಕ್ಷಕರು ಊಟಕ್ಕೆಂದು ಮನೆಗೆ ಹೋಗಿರುವಾಗ ಘಟನೆ ನಡೆದಿದ್ದು, ಶಾಲೆಯಲ್ಲಿ ಯಾರೂ ಇರಲಿಲ್ಲ. ಒಮ್ಮೆಲೆ ಮಳೆ ನೀರಿನಲ್ಲಿ ಹರಿದು ಬಂದ ಹಾವುಗಳನ್ನು ಕಂಡು ಮಕ್ಕಳು ಗಾಭರಿಗೊಂಡು ರಸ್ತೆಗೆ ಹೋಗುವ ಪಾದಚಾರಿಗಳನ್ನು ಕರೆದು ಆತಂಕ ವ್ಯಕ್ತಪಡಿಸಿದ್ದಲ್ಲದೇ ಮಕ್ಕಳು ಚೀರಾಟ ಶುರುವಿಟ್ಟಿದ್ದಾರೆ.

ರಸ್ತೆಯಲ್ಲಿನ ಚರಂಡಿಗಳು ಮಾಯವಾಗಿವೆ. ಅಲ್ಲದೇ ಶಾಲೆಯ ಪಕ್ಕದಲ್ಲಿಯೇ ಕಟ್ಟಿಗೆ ಅಡ್ಡೆಗಳಿದ್ದು, ರಸ್ತೆ ಮೇಲೆ ಹರಿಯುವ ಮಳೆ ನೀರು ಶಾಲಾ ಆವರಣಕ್ಕೆ ನುಗ್ಗಿದ ಪರಿಣಾಮ ವಿಷ ಜಂತುಗಳು ಶಾಲಾ ಆವರಣಕ್ಕೆ ಬಂದಿವೆ. ರಮೇಶ ಸರ್ವಂದಿ ಎಂಬವರು ಹಾವುಗಳನ್ನು ನೋಡಿ ಮಕ್ಕಳನ್ನು ಶಾಲೆಯ ಆವರಣದಿಂದ ಹೊರ ತಂದ ಕಾರಣ ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ.

ಆವರಣದಲ್ಲಿನ ಅಡುಗೆ ಕೋಣೆ ಸೇರಿದ ಹಾವು ಕೆಲ ಕಾಲ ತಾನು ಸೇಫು ಎಂದು ಕುಳಿತಿತ್ತು. ಹಾವು ಹೊಡೆಯಲು ಬಂದ ಇಬ್ಬರಿಗೆ ಹಾವು ಕಾಣಲೇ ಇಲ್ಲದ ಕಾರಣ ಹಾವು ಪರಾರಿಯಾಗಿದೆ ಎಂದರು. ಅಷ್ಟರಲ್ಲಿಯೇ ಹಾವಾಡಿಗ ಗುರಾನ್ ಹಾಗೂ ಬಾಬು ಬುರಾನ್ ಬಂದು ಅಡುಗೆ ಕೋಣೆ ಹೊಕ್ಕು ಕೋಣೆಯ ಒಲೆಯ ಪಕ್ಕಕ್ಕು ಅವಿತು ಕುಳಿತಿದ್ದ ಹಾವೊಂದನ್ನು ಹಿಡಿದು ತಂದರು.

        ಇನ್ನೊಂದು ಹಾವು ಹೇಗೆ ಪರಾರಿ ಆಯಿತು ಗೊತ್ತಾಗದೇ ಹಿಡಿದ ಹಾವೊಂದನ್ನು ಆಡಿಸುತ್ತ ಆತಂಕಕ್ಕೊಳಗಾಗಿದ್ದ ಮಕ್ಕಳಿಗೆ ಹಾಗೂ ಶಾಲಾ ಸಿಬ್ಬಂದಿಗಳ ಆತಂಕ ದೂರು ಮಾಡಿದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group