ವರದಿ : ರವಿಚಂದ್ರ ಮಲ್ಲೇದ್
ವರದಿಗಾರ ಸಿಂದಗಿ : ಪದೇ ಪದೇ ಗೋವಾ ಸರಕಾರದಿಂದ ಒಕ್ಕಲೆಬ್ಬಿಸುವ ಹಾಗೂ ನಿರಂತರ ದೌರ್ಜನ್ಯ ನಡೆಸುತ್ತಿರುವುದನ್ನೂ ಖಂಡಿಸಿ, ರಾಜ್ಯ ಸರಕಾರ ಕನ್ನಡಿಗರ ರಕ್ಷಣೆಗೆ ಧಾವಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ ವಿರೇಶ ಬಿರಾದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಮಾತನಾಡಿ, ಗೋವಾದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿರಾಶ್ರಿತ ಕನ್ನಡಿಗರ ಮೇಲೆ ಅಲ್ಲಿನ ಸರಕಾರ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು. ಸಮಯ ಬಂದಾಗಲೊಮ್ಮೆ ತಗಾದೆ ತೆಗೆಯುವ ಕನ್ನಡಿಗರನ್ನು ಒಕ್ಕಲೆಬ್ಬಿಸುತ್ತಿದ್ದು ಅತ್ಯಂತ ನೋವಿನ ಸಂಗತಿ. ಪ್ರಜಾಪ್ರಭುತ್ವ ನಾಡಿನಲ್ಲಿ ಯಾರು ಎಲ್ಲಿ ಬೇಕಾದರು ಜೀವನ ಮಾಡುವ ಹಕ್ಕು ಮನಗಂಡ ಅಲ್ಲಿನ ಸರಕಾರ ಮನೆ ಹಕ್ಕುಪತ್ರಗಳನ್ನು ನೀಡಿದ್ದಾರೆ. ಪಡಿತರ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಸ್ಥಳೀಯ ಸಂಸ್ಥೆಗೆ ಕರ ತುಂಬಿ ವಾಸಿಸುವ ಹಕ್ಕು ಪಡೆದಿದ್ದರೂ ಸಹ ಗೋವಾ ಸರಕಾರ ಪುಂಡತನ ತೋರಿ ದೇವಾಲಯ ಸೇರಿದಂತೆ ಮನೆಗಳನ್ನು ಧ್ವಂಸಗೊಳಿಸಿ ನಿರಾಶ್ರಿತರನ್ನಾಗಿಸಿದ್ದು ಹೇಯ ಕೃತ್ಯ ಎಂದು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯ ಸಮ್ಮತ ಜೀವನ ಸುಧಾರಿಸಿಕೊಳ್ಳುತ್ತಿರುವ ಅಲ್ಲಿನ ಕನ್ನಡಿಗರಿಗೆ ಸಂವಿಧಾನದ ಸಮಾನ ಹಕ್ಕನ್ನುದೊರಕಿಸುವ ದೆಸೆಯಲ್ಲಿ ಸರಕಾರ ಮಧ್ಯಪ್ರವೇಶಿಸಿ ಸ್ವಾಭಿಮಾನಿ ಕನ್ನಡಿಗರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು.
ಚೇತನ ಸಿ ರಾಂಪೂರ, ರಮಾಕಾಂತ ಬಿರಾದಾರ, ಮುತ್ತುರಾಜ ಹಿಪ್ಪರಗಿ, ಸುನೀಲ ಬಡಿಗೇರ, ಪ್ರಶಾಂತ ಕದ್ದರಕಿ, ರಮೇಶ ಸರಸಂಬಿ, ಪ್ರವೀಣ ತಳವಾರ, ಸಚ್ಚಿನ ಮಠ, ವಿಠಲ ನಾಯ್ಕಡಿ, ದತ್ತು ಪಾಟಿಲ, ಆನಂದ ಪೂಜಾರಿ, ರಾಮೂ ಖೈನೂರ, ವಿನಯ ಮೌನಿ, ಅನೀಲ ಜೇರಟಗಿ, ಶೀವು ಪಾರ್ಥನಹಳಿ, ವಿನೊದ ಗಣಿಹಾರ, ಕಿರಣ ದೇವಣಗಾಂವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
