ರಾಷ್ಟ್ರೀಯ ಸುದ್ದಿ

ಗುಜರಾತ್ ಹಾಗೂ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ: ಆರೆಸ್ಸೆಸ್ ಸಮೀಕ್ಷೆ !

ವರದಿಗಾರ :  ಕೇಂದ್ರದಲ್ಲಿ ಹಾಗೂ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕಷ್ಟಕಾಲ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಡೆಸಿದ ಸಮೀಕ್ಷೆಯು ತನ್ನದೇ ರಾಜಕೀಯ ಅಂಗವಾದ ಬಿಜೆಪಿಯ ಸೋಲನ್ನು ಖಚಿತ ಪಡಿಸಿದೆ. ಕಳೆದೊಂದು ದಶಕದಿಂದ ಬಿಜೆಪಿಯ ಭದ್ರ ಕೋಟೆಗಳೆಂದೇ ಕರೆಸಲ್ಪಟ್ಟಿದ್ದ ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸೋಲನ್ನಪ್ಪುವುದನ್ನು ಖಚಿತಪಡಿಸಿದೆ ಅರೆಸ್ಸೆಸ್ ಸಡೆಸಿದ ಸಮೀಕ್ಷೆ.

ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ 120 ಅಥವಾ ಹೆಚ್ಚು ಸೀಟುಗಳು ಲಭ್ಯವಾಗುವ ಸಾಧ್ಯತೆಗಳಿದ್ದರೆ ಬಿಜೆಪಿಯು ಕಷ್ಟದಿಂದ 57-60 ಸೀಟುಗಳಲ್ಲಿ ಜಯಗಳಿಸಬಹುದು. ಬಿಜೆಪಿಯ ವೋಟು ಹಂಚಿಕೆಯಲ್ಲಿ 10% ಕಡಿಮೆಯಾಗಬಹುದು. ಸಮೀಕ್ಷೆಯು ಗುಜರಾತಿನಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಬರುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಸಮೀಕ್ಷಾ ವರದಿಯನ್ನು ಬಿಜೆಪಿಯ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿಯವರಿಗೆ ಸಲ್ಲಿಸಲಾಗಿದೆ.

ಗುಜರಾತಿನಲ್ಲಿ ಬಿಜೆಪಿಯ ವೋಟು ಹಂಚಿಕೆಯಲ್ಲಿ 8% – 10% ಇಳಿಕೆಯನ್ನು ಸಮೀಕ್ಷೆ ತಿಳಿಸಿದೆ. ಮಧ್ಯಪ್ರದೇಶದಲ್ಲಿ 2012ರಲ್ಲಿ ಜಯಗಳಿಸಿದ ಸೀಟುಗಳ ಅರ್ಧದಷ್ಟೂ ಈ ಬಾರಿ ಅಸಾಧ್ಯ ಎನ್ನಲಾಗಿದೆ. ಇತ್ತೀಚೆಗೆ ಅಮಿತ್ ಶಾ ಮಧ್ಯಪ್ರದೇಶದಲ್ಲಿ 150 ಸೀಟುಗಳ ನಿರೀಕ್ಷೆ ವ್ಯಕ್ತಪಡಿಸಿದರೆ, ಮರುದಿನವೇ ಅಲ್ಲಿನ ಮುಖ್ಯಮಂತ್ರಿ 200ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಬಹುದು ಎಂದಿದ್ದಾರೆ. 230 ಸೀಟುಗಳಿರುವ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು 116 ಸೀಟುಗಳ ಅವಶ್ಯಕತೆಯಿದೆ. ಆದರೆ ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ ಇದು ತೀರಾ ಅಸಾಧ್ಯ ಎನ್ನಲಾಗಿದೆ

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group