ರಾಷ್ಟ್ರೀಯ ಸುದ್ದಿ

ವರದಿ ಮಾಡಿದ್ದೇ ಪತ್ರಕರ್ತನ ತಪ್ಪು: ಮಂಗಳೂರಿನಲ್ಲಿ ಕೇಸು, ತಮಿಳುನಾಡಿನಲ್ಲಿ ಜೀವ ಬೆದರಿಕೆ !!

ವರದಿಗಾರ: ತಮಿಳುನಾಡಿನ ಮದುರೈನ ವೆಲ್ಲಲೂರ್ ಗ್ರಾಮದ ಯೆಳೈಕಾಥ ಅಮ್ಮನ್ ನಲ್ಲಿ ಅಪ್ರಾಪ್ತ ಬಾಲಕಿಯರನ್ನು ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ಆಚರಣೆ ಚಾಲ್ತಿಯಲ್ಲಿದ್ದು, ಈ ಕುರಿತು ವರದಿ ಮಾಡಿದ ಪತ್ರಕರ್ತರಿಗೆ ನಿರಂತರವಾಗಿ ಜೀವ ಬೆದರಿಕೆ ಬರುತ್ತಿರುವ ಬಗ್ಗೆ ವರದಿಯಾಗಿದೆ.

ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ 7 ಬಾಲಕಿಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಬಾಲಕಿಯರನ್ನು ಅರೆನಗ್ನವಾಗಿ ಕೊಠಡಿಯೊಂದರಲ್ಲಿ 15 ದಿನ ಕೂಡಿಹಾಕಲಾಗುತ್ತದೆ. ಸೊಂಟಕ್ಕೆ ಮಾತ್ರ ರೇಶ್ಮೆ ಬಟ್ಟೆಯೊಂದನ್ನು ಸುತ್ತಲಾಗುತ್ತದೆ. 15 ದಿನದ ನಂತರ, ಬಾಲಕಿಯರಿಗೆ ಆಭರಣಗಳನ್ನು ತೊಡಿಸಿ ಅರೆನಗ್ನವಾಗಿ ನೂರಾರು ಜನ ಸೇರಿರುವ ಬೀದಿಯಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ. ಬಾಲಕಿಯರನ್ನು ‘ಅಮ್ಮನ್ ದೇವಿ’ಗೆ ನೀಡುವ ಪದ್ಧತಿ ಇದು ಎಂಬುದು ಅವರ ಪಾಲಕರ ನಂಬಿಕೆ. ಸುಮಾರು 62 ಗ್ರಾಮಗಳ ಜನ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಾಲಕರು ಕರೆದುಕೊಂಡು ಬಂದ ಬಾಲಕಿಯರಲ್ಲಿ 15 ಮಂದಿಯನ್ನು ದೇವಸ್ಥಾನದ ಅರ್ಚಕರು ಆಯ್ಕೆ ಮಾಡುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ. ಬಳಿಕ ಅವರನ್ನು ಕೋಣೆಯಲ್ಲಿ ಕೂಡಿಹಾಕಲಾಗುತ್ತದೆ.

ಕೋವೈ ಪೋಸ್ಟ್ ವರದಿ ಸಂದರ್ಭ ಬಿಡುಗಡೆಗೊಳಿಸಿದ ವಿಡಿಯೋ:

ಈ ಬಗ್ಗೆ ‘ಕೋವೈ ಪೋಸ್ಟ್’ ಅಂತರ್ಜಾಲ ಸುದ್ದಿ ವಾಹಿನಿಯು ಇತ್ತೀಚೆಗೆ ಘಟನೆಯ ವಿಡಿಯೋ ಸಹಿತ ವರದಿ ಮಾಡಿತ್ತು. ತಕ್ಷಣವೇ ಆಚರಣೆ ಬಗ್ಗೆ ತನಿಖೆ ನಡೆಸಲು ಮದುರೈ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಕೋವೈ ಪೋಸ್ಟ್ ವರದಿಯಿಂದಾಗಿ ಜಿಲ್ಲಾಧಿಕಾರಿ ತನಿಖೆಗೆ ತಂಡವನ್ನು ಕಳುಹಿಸಿದ್ದಾರೆ ಎಂಬುದು ಬಯಲಾಗುತ್ತಿದ್ದಂತೆ,ಕೋವೈ ಪೋಸ್ಟ್ ಅಂತರ್ಜಾಲ ಸುದ್ದಿ ವಾಹಿನಿಯ ಮುಖ್ಯ ಸಂಪಾದಕಿ ವಿದ್ಯಾಶ್ರೀ ಧರ್ಮರಾಜ್ ಹಾಗೂ ಹಿರಿಯ ಪರ್ತಕರ್ತರಾದ ಎ.ಆರ್. ಮೇಯಮ್ಮಾಯಿ ಅವರಿಗೆ 48 ಗಂಟೆಗಳ ಅವಧಿಯಲ್ಲಿ ಇವರಿಗೆ 200ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿರುವುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಬೆದರಿಕೆಯೊಡ್ಡಲಾಗಿದೆ. ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂಬ ಜೀವ ಬೆದರಿಕೆಯ ಧ್ವನಿ ಸಂದೇಶಗಳು ವಾಟ್ಸ್‌ಆ್ಯಪ್‌ ನಲ್ಲೂ ಬಂದಿದೆ ಎಂದು ಸ್ಕ್ರಾಲ್ ಡಾಟ್ ಇನ್ ವರದಿ ಮಾಡಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಸಮೀಪ ಪೊಲೀಸರು ಮನೆಯೊಂದರಲ್ಲಿ ನಡೆಸಿದ ಅಮಾನವೀಯತೆಯನ್ನು ವರದಿ ಮಾಡಿದ ವಾರ್ತಾಭಾರತಿ ಪತ್ರಿಕೆಯ ವರದಿಗಾರನ ಮೇಲೆ ಹಾಗೂ ಸಂಪಾದಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ನೆನಪಿಸಬಹುದು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group