ವರದಿಗಾರ-ಕೊಚ್ಚಿ: ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತಾಂತರವಾಗುವ ಮತ್ತು ವಿವಾಹವಾಗುವ ಹಿಂದೂ ಹೆಣ್ಣು ಮಕ್ಕಳನ್ನು ಹಲ್ಲೆ, ಬೆದರಿಕೆಗಳ ಮೂಲಕ ‘ಘರ್ ವಾಪಸಿ’ ನಡೆಸುತ್ತಾರೆನ್ನುವ ಆಘಾತಕಾರಿ ವರದಿಯನ್ನು ಇತ್ತೀಚೆಗೆ ಕೇರಳದ ಮೀಡಿಯಾ ಓನ್ ಬಹಿರಂಗಪಡಿಸಿತ್ತು. ಈ ಬಗ್ಗೆ ಘಟನೆಯ ಬಗ್ಗೆ ವಿವರಿಸಿದ್ದ ದೌರ್ಜನ್ಯಕ್ಕೊಳಗಾದ ಆಯುರ್ವೇಧ ವೈದ್ಯೆಯು ನ್ಯಾಯಾಲಯದಲ್ಲಿ ಘರ್ ವಾಪಸಿ ಕೇಂದ್ರದ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ದೌರ್ಜನ್ಯ ನಡೆಸಿದ ಆರೋಪದಲ್ಲಿ ಘರ್ ವಾಸಪಿ ಕೇಂದ್ರದ ವ್ಯವಸ್ಥಾಪಕ ಮನೋಜ್ ಗುರೂಜಿಯ ಮುಖ್ಯ ಸಹಾಯಕ ಎನ್ನಲಾದ ಶ್ರೀಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶ್ರೀಜೇಶ್ ಹೈಕೋರ್ಟಿನ ನ್ಯಾಯವಾಧಿ ಎಂದು ಪರಿಚಯಿಸಿದ್ದು, ಘರ್ ವಾಪಸಿ ಕೇಂದ್ರದಲ್ಲಿದ್ದ ಯುವತಿಯರಿಗೆ ಬೆದರಿಕೆ ಹಾಕುವುದಕ್ಕೆ ನೇತೃತ್ವ ವಹಿಸಿಕೊಂಡಿದ್ದರು ಎನ್ನಲಾಗಿದೆ.
ಪ್ರಕರಣವು ಬಹಿರಂಗವಾಗುತ್ತಿದ್ದಂತೆ ಘರ್ ವಾಪಸಿ ಕೇಂದ್ರದ ವ್ಯವಸ್ಥಾಪಕ ಮನೋಜ್ ಗುರೂಜಿ ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಗುರೂಜಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅದಲ್ಲದೆ ಸ್ಥಳೀಯ ಪಂಚಾಯತ್ ಯೋಗ ಕೇಂದ್ರದ ಹೆಸರಿನಲ್ಲಿ ನಡೆಯುವ ಘರ್ ವಾಪಸಿ ಕೇಂದ್ರವನ್ನು ಮುಚ್ಚುವಂತೆ ನೊಟೀಸ್ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ: ಘರ್ ವಾಪಸಿ ನೆಪದಲ್ಲಿ ಚಿತ್ರಹಿಂಸೆ; ಕೊಲೆ ಬೆದರಿಕೆ ಒಡ್ಡಿ ಮರು ಮತಾಂತರ
