ವರದಿಗಾರ-ಶಿವಮೊಗ್ಗ: ಬೆನ್ನಿಗೆ ಚೂರಿ ಹಾಕುವ ಕಲೆ ಗೊತ್ತಿದ್ದರೆ ನಾನೂ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದಿದ್ದಾರೆ. ಹಿಂದಿನಿಂದಲೂ ನಿಷ್ಠನಾಗಿ ಇದ್ದೇನೆ. ಹಾಗಾಗಿ, ಈಗಲೂ ಸಚಿವನಾಗಿ ಮುಂದುವರಿದಿದ್ದೇನೆ. ಪಕ್ಷ ಸೂಚಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.
ನಮ್ಮದು ಮಾಸ್ ಪಕ್ಷ. ಪಕ್ಷ ಹೇಳಿದ ಕೆಲಸ ಮಾಡುವುದಷ್ಟೇ ನಮ್ಮ ಕೆಲಸ. ರಾಜ್ಯ ಸರಕಾರ ನಾಲ್ಕೂವರೆ ವರ್ಷ ಉತ್ತಮ ಕೆಲಸ ಮಾಡಿದೆ ಎಂದಿದ್ದಾರೆ.
