ಸಾಮಾಜಿಕ ತಾಣ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಚೀನಾ ನಿರ್ಮಿತ ‘ಎಂಟ್ರಿ ಪಾಸ್’ : ಚೀನಾ ಉತ್ಪನ್ನ ವಿರೋಧಿ ಅಭಿಯಾನ ಯಾರಿಗೆ ?

► ‘ಮೇಕ್ ಇನ್ ಇಂಡಿಯಾ’ ಕೇವಲ ಭಾಷಣ ಹಾಗೂ ಪ್ರಣಾಳಿಕೆಗಳಿಗೆ ಸೀಮಿತವೇ?

► ಚೈನಾ ನಿರ್ಮಿತ ವಸ್ತುಗಳ ಬಹಿಷ್ಕಾರಕ್ಕೆ ಕರೆಯಿತ್ತು ದೇಶಪ್ರೇಮ ಪ್ರಕಟಿಸುವವರ ಅಸಲಿ ಬಣ್ಣ!

► ಪ್ರವೇಶಪತ್ರದಲ್ಲಿ ಹಿಂದಿಯನ್ನು ಹಿಂದಿಕ್ಕಿ ಸ್ಥಾನ ಪಡೆದ ಚೈನೀಸ್ ಭಾಷೆ !

 

ವರದಿಗಾರ ದೆಹಲಿ :  ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಚೀನಾದಲ್ಲಿ ತಯಾರಿಸಲಾದ ‘ಎಂಟ್ರಿ ಪಾಸ್’ ಉಪಯೋಗಿಸಿದ್ದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಡೋಕ್ಲಾಮ್ ಗಡಿ ವಿವಾದವು ತಾರಕಕ್ಕೇರಿದಾಗ ಹಲವು ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಚೀನಾ ನಿರ್ಮಿತ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಹೆಚ್ಚಾಗಿ ಸ್ವದೇಶಿ ವಸ್ತುಗಳನ್ನು ಬಳಸುವಂತೆ ವಿನಂತಿಸಿ ತಮ್ಮ ದೇಶಪ್ರೇಮವನ್ನು ಪ್ರಕಟಿಸುತ್ತಿದ್ದರು. ಅದಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, 2014ರಲ್ಲಿ ಕೇಂದ್ರ ಸರಕಾರದಿಂದ ಚಾಲನೆಗೊಂಡ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಬೆಂಬಲಿಸುವಂತೆ ವಿನಂತಿಸುತ್ತಿರುವಾಗಲೇ ಬಿಜೆಪಿಯು ಚೀನಾ ನಿರ್ಮಿತ ಪಾಸ್ ಗಳನ್ನು ಉಪಯೋಗಿಸಿರುವುದು ಗಮನಾರ್ಹ.

 

ಕಾರ್ಯಕ್ರಮದ ಪ್ರವೇಶಪತ್ರದ ಪ್ರತಿ

ಬಿಜೆಪಿ ನಾಯಕರು ಹಿಂದಿ ಭಾಷೆಗೆ ಒತ್ತು ನೀಡಿ, ಅದನ್ನು ರಾಷ್ಟ್ರೀಯ ಭಾಷೆ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು. ಆದರೆ ತಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಉಪಯೋಗಿಸಿದ ಪಾಸ್ ನಲ್ಲಿ ಹಿಂದಿ ಭಾಷೆ ಕಂಡು ಬರಲಿಲ್ಲ, ಬದಲಾಗಿ ಇಂಗ್ಲೀಷ್ ಹಾಗೂ ಚೈನೀಸ್ ಭಾಷೆ (ಮ್ಯಾಂಡರಿನ್)  ಕಂಡು ಬರುತ್ತಿತ್ತು. ಅದಲ್ಲದೆ, ಎಂಟ್ರಿ ಪಾಸ್ ನಲ್ಲಿ ‘ಮೇಡ್ ಇನ್ ಚೈನಾ’ ಎಂದೂ ಮುದ್ರಿಸಲಾಗಿತ್ತು.

ಸೋಮವಾರದಂದು, ಇಂಡಿಯನ್ ಎಕ್ಸ್’ಪ್ರೆಸ್ ಪತ್ರಿಕೆಯ ಸಹಾಯಕ ಸಂಪಾದಕಿ, ಲಿಝ್ ಮಾಥ್ಯೂ ಬಿಜೆಪಿಯ ಎಂಟ್ರಿ ಪಾಸ್ ನ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿದ್ದರು.

Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group