ರಾಜ್ಯ ಸುದ್ದಿ

ರಾಜೀನಾಮೆ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ

ವರದಿಗಾರ-ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಯಂತ್ ಪಟೇಲ್ ಸೋಮವಾರ ಮಧ್ಯಾಹ್ನ ರಾಜೀನಾಮೆ ನೀಡಿದ್ದಾರೆ.

ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ , ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ನೇಮಕಾತಿ ಮಾಡದಿರುವುದರಿಂದ ಪ್ರತಿಭಟಿಸಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ಕೈಕೋರ್ಟ್ ನ ಹಿರಿಯ ಉನ್ನತ ನ್ಯಾಯಾಧೀಶರಾದ ಜಯಂತ್ ಪಟೇಲ್ ತನ್ನ ರಾಜೀನಾಮೆಯನ್ನು ಮುಖ್ಯ ನಾಯಧೀಶರಾದ ಎಸ್. ಕೆ. ಮುಖರ್ಜಿಯವರಿಗೆ ಸಲ್ಲಿಸಿದ್ದಾರೆ. ನಾಯಧೀಶ ಮುಖರ್ಜಿಯವರು, ಸುಪ್ರೀಂ ಕೋರ್ಟ್ ಗೆ ನೇಮಕಗೊಳ್ಳದಿದ್ದಲ್ಲಿ ಅಕ್ಟೋಬರ್ 9ರಂದು ನಿವೃತ್ತಿ ಹೊಂದಲಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಗೆ ತಮ್ಮ ವರ್ಗಾವಣೆಯನ್ನು ಪ್ರತಿಭಟಿಸಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಅವರು ಮೂರನೇ ಹಿರಿಯ ನ್ಯಾಯಾಧಿಶರಾಗಿದ್ದಾರೆ.

ಈ ಹಿಂದೆ ಗುಜರಾತ್ ಹೈಕೋರ್ಟ್’ನ ಬಾರ್ ಅಸೋಸಿಯೇಶನ್, ನಾಯಧೀಶ ಜಯಂತ್ ಪಟೇಲ್ ರನ್ನು ಗುಜರಾತ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸದೆ, ಜಸ್ಟೀಸ್ ಅಭಿಲಾಶಾ ಕುಮಾರಿಯವರನ್ನು ನೇಮಿಸಿದ್ದನ್ನು ಪ್ರಶ್ನಿಸಿತ್ತು.

ಯಾವುದೇ ನ್ಯಾಯ ಸಮ್ಮತ ಕಾರಣ ಅಥವಾ ಸಮರ್ಥನೆಯಿಲ್ಲದೆ ನಾಯಧೀಶ ಜಯಂತ್ ಪಟೇಲ್ ರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಿಸದಿದ್ದನ್ನು ಹಾಗೂ ಜಸ್ಟೀಸ್ ಅಭಿಲಾಷಾ ಕುಮಾರಿಯವರ ನೇಮಕಾತಿಯನ್ನು ಆಘಾತಕಾರಿ ಎಂದು ಬಾರ್ ಅಸೋಸಿಯೇಶನ್ ಹೇಳಿತ್ತು.

ಹಿರಿಯ ವಕೀಲರಾದ ದುಶ್ಯಂತ್ ದವೆ ಲೇಖನವೊಂದರಲ್ಲಿ ಹಾಗೂ ಯತಿನ್ ಓಝಾ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜಸ್ಟೀಸ್ ಪಟೇಲ್ ದೇಶದ ಸ್ವತಂತ್ರ ನ್ಯಾಯಾಧೀಶರಲ್ಲೊಬ್ಬರು ಹಾಗೂ ಅವರು ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದ್ದಕ್ಕಾಗಿ ಬೆಲೆ ತೆರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಸ್ಟೀಸ್ ಪಟೇಲ್ ರು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ಫೆಬ್ರವರಿ 13, 2016ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.  2015 ರ ಆಗಸ್ಟ್  13ರಂದು ಗುಜರಾತ್ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group