ವರದಿಗಾರ ಸಿಂದಗಿ : ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ದಿಸೆಯಲ್ಲಿ ಸಂಘಟನಾತ್ಮಕವಾಗಿ ಒಕ್ಕೂಟ ರಚಿಸುವ ಅವಶ್ಯಕತೆ ಇದೆ ಎಂದು ವಿದಾನಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು. ಪಟ್ಟಣದ ಜಿ.ಪಿ.ಪೋರವಾಲ ಮಹಾವಿದ್ಯಾಲಯದಲ್ಲಿ ಜರುಗಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ರಚನೆ ಕುರಿತ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು
ಸಂಘಟನೆ ಆದರೆ ನಿರೀಕ್ಷೆಗಳು ಹುಟ್ಟುತ್ತವೆ. ಆದರೆ ಈ ಒಕ್ಕೂಟ ವಾಸ್ತವಿಕ ಆಧಾರದ ಮೇಲೆ ಚಿಂತಿತವಾಗಲಿ. ಪ್ರತಿಯೊಬ್ಬರೂ ಇಲ್ಲಿ ಒಗ್ಗಟ್ಟಾಗಿ ಸಮಸ್ಯೆಗಳ ಪರಿಹಾರಕ್ಕೆ ಒಂದಗೂಡಲು, ಸ್ಪಂಧಿಸಲು ನೆರವಾಗುತ್ತದೆ ಎಂದರು. ಕೆಲವು ಸಂಸ್ಥೆಯ ಮುಖ್ಯಸ್ಥರು ಮಾತನಾಡಿ, ಅನುದಾನ ರಹಿತ ಸಹಿತ ಎಂಬ ಬೇಧವಿಲ್ಲದೇ ಒಕ್ಕೂಟ ಸಂಘಟಿತವಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರಗಳ ಸಮಸ್ಯೆ ಬೆಟ್ಟದಷ್ಟಿದೆ. ಅದನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಪರಸ್ಪರ ಸ್ಪಂಧಿಸಬೇಕು ಎಂದು ಹೇಳಿದರು.
ತಾ.ಶಿ.ಪ್ರ ಮಂಡಳಿಯ ಅಶೋಕ ಮನಗೂಳಿ, ಅಂಜುಮನ್ ಸಂಸ್ಥೆಯ ಎಸ್.ಎಂ.ಪಾಟೀಲ(ಗಣಿಯಾರ), ಪ್ರಕಾಶ ಚೌಧರಿ, ಡಿ.ಜಿ.ಮಠ, ಆರ್.ಡಿ.ಕುಲಕರ್ಣಿ, ಎಸ್.ಬಿ.ಜಾಧವ, ವಾಯ್.ಬಿ.ನಾಟಿಕಾರ, ಶಿವಕುಮಾರ ಗುಂದಗಿ, ರಾಜಅಹ್ಮದ ಬೆಣ್ಣೆಶಿರೂರ ಮಾತನಾಡಿದರು.
ಪೂಜ್ಯಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರರು ಮತ್ತು ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು ಸಾನಿದ್ಯ ವಹಿಸಿ ಮಾತನಾಡಿದರು.
ಪ್ರಾಚಾರ್ಯ ಉಮೇಶ ಕೋಳೆಕರ ಸ್ವಾಗತಿಸಿ ನಿರೂಪಿಸಿದರು. ಕಸಾಪ ಅಧ್ಯಕ್ಷ ಸಿಂದಲಿಂಗ ಚೌ‘ರಿ ವಂದಿಸಿದರು.
