ವರದಿಗಾರ-ರೋಮ್: ಇಟಲಿಯಲ್ಲಿ ಭಾನುವಾರ ಆಯೋಜಿಸಿದ್ದ ಮಿಲಿಟರಿ ‘ಏರ್ ಶೋ’ ಪ್ರದರ್ಶನ ಸಂದರ್ಭ ಮಿಲಿಟರಿ ವಿಮಾನವು ವೀಕ್ಷಣೆಗಾಗಿ ಆಗಮಿಸಿದ್ದ ಸಾವಿರಾರು ವೀಕ್ಷಕರ ಮುಂದೆಯೇ ಸಮುದ್ರಕ್ಕೆ ಉರುಳಿ ಬಿದ್ದಿದ್ದು, ಘಟನೆಯಿಂದ ಮಿಲಿಟರಿ ಪೈಲೈಟ್ ಸಾವನ್ನಪ್ಪಿದ್ದಾರೆ.
ಇಟಲಿಯಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಟೆರಿಸಿನಾ ನಗರದಲ್ಲಿ ಯುರೋಫೈಟರ್ ಜೆಟ್ ಹೆಸರಿನ ವಿಮಾನ ತನ್ನ ಪ್ರದರ್ಶನವನ್ನು ತೋರಿಸಲು ಭಾಗವಹಿಸಿತ್ತು. ಏರ್ ಶೋ ಪ್ರದರ್ಶನ ನೀಡುತ್ತಿದ್ದ ಮಿಲಿಟರಿ ವಿಮಾನವು ಹಠಾತ್ತನೆ ನಿಯಂತ್ರಣವನ್ನು ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ.
ವಿಮಾನ ಪತನಗೊಳ್ಳಲು ನಿಖರ ಕಾರಣಗಳು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿದೆ.
