ರಾಜ್ಯ ಸುದ್ದಿ

ಆಕ್ರಮ ಗೋ ಹತ್ಯೆ ಆರೋಪ: ತಂಡದಿಂದ ಹಲ್ಲೆ

ಪತಿ ವಿರುದ್ಧ ಪತ್ನಿಯಿಂದಲೇ ದೂರು

ವರದಿಗಾರ-ಶಿವಮೊಗ್ಗ: ಬಿಲ್ಲೋಡಿ ಗ್ರಾಮದ ಈಶ್ವರ ನಾಯ್ಕ ಹಾಗೂ ಜೋಬಿ ಎಂಬವರ ಮನೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಂಡವೊಂದು ಶನಿವಾರ ರಾತ್ರಿ ಹಲ್ಲೆ ನಡೆಸಿದೆ.

ಹಲ್ಲೆ ನಡೆಸಿದ ಆರೋಪದಡಿ ವಸಿಷ್ಠ, ಅಭಿಲಾಷ, ರಾಘವೇಂದ್ರ, ಪ್ರಭಾಕರ, ಕಿರಣಕುಮಾರ್, ಜಗದೀಶ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಗೋ ಹತ್ಯೆ ಮಾಡಿದ ಈಶ್ವರ ನಾಯ್ಕ ಹಾಗೂ ಜೋಬಿ ಮೇಲೂ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯ ಪತ್ರಿಕೆಯೊಂದು ವರದಿ ಮಾಡಿವೆ.

ಈ ಬಗ್ಗೆ ಗೋ ರಕ್ಷಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಗೋ ಹಂತಕರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ಧ ಬಿಲ್ಲೋಡಿ ಗ್ರಾಮಸ್ಥರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಸೀತಾರಾಮ ಭಟ್, ಕಾನೂನುಬಾಹಿರವಾಗಿ ಗೋವುಗಳ ಹತ್ಯೆ ಮಾಡುವವರನ್ನು ಸರಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪತಿಯ ವಿರುದ್ಧ ದೂರು ದಾಖಲಿಸಿರುವ ಪತ್ನಿ, ತಮ್ಮ ಪತಿ ಗೋವುಗಳನ್ನು ಅಕ್ರಮವಾಗಿ ತಂದು, ಹತ್ಯೆ ಮಾಡಿ, ಮಾಂಸ ಮಾರುವವರಿಗೆ ಸಹಕರಿಸುತ್ತಿದ್ದಾರೆ. ಇದರಿಂದ ಗ್ರಾಮದ ಶಾಂತಿಗೆ ಭಂಗವಾಗುತ್ತಿದೆ ಎಂದು ಈಶ್ವರ ನಾಯ್ಕನ ಪತ್ನಿ ಶಾರದಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group