ವರದಿಗಾರ-ಬೆಂಗಳೂರು: ಸಿದ್ದರಾಮಯ್ಯಗೆ ಅಹಂಕಾರ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ‘ಮೀಟರ್ ಇಲ್ಲ’ ಎಂಬ ಪದ ಬಳಕೆ ಮಾಡುವ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು ಕಾಮ್’ಕಿ ಬಾತ್ ಅಲ್ಲ, ಅವರದ್ದು ಸುಳ್ಳುಗಳ ಸರಮಾಲೆ ಬಾತ್’ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯರ ಕಾಮ್’ಕಿ ಬಾತ್ ಏನು ಎಂಬುವುದನ್ನು ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ತೋರಿಸಿದ್ದಾರೆ. ಭ್ರಷ್ಟಾಚಾರ, ಜಾತ್ಯತೀತತೆಯ ಮುಖವಾಡ ಧರಿಸಿ ಜಾತೀಯ ವಿಷ ಬೀಜವನ್ನು ಭಿತ್ತಿ, ಜಾತಿ-ಧರ್ಮಗಳ ನಡುವೆ ಒಡೆದು ಆಳುವುದೇ ನಿಮ್ಮ ಕಾಮ್’ಕಿ ಬಾತ್ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಹೇಳಿಕೆಯಲ್ಲಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವಿರುದ್ಧ ಈ ಪದವನ್ನು ಉಪಯೋಗಿಸಬಾರದಿತ್ತು. ‘ಮೀಟರ್’ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತದಲ್ಲಿ ಇರುವ ಪದ. ಒಬ್ಬ ಗೌರವಾನ್ವಿತ ಮುಖ್ಯಮಂತ್ರಿ ಬಳಸಬಹುದಾದ ಪದವೇ ಅಲ್ಲ ಎಂದು ಹೇಳಿದ್ದಾರೆ.
