ವರದಿಗಾರ-ತಿರುವನಂತಪುರ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕೇರಳದ ಹಾದಿಯಾ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಖ್ಯಾತ ಸಾಹಿತಿ ಕೆ.ಸಿ.ಸಚ್ಚಿದಾನಂದ್, ಹಾದಿಯಾ ವಿವಾಹವನ್ನು ಅಮಾನ್ಯಗೊಳಿಸಿದಂತೆ ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ತಪ್ಪು ಸಂಭವಿಸಿದೆ ಎಂದು ಹೇಳಿದ್ದಾರೆ.
ಸಾಹಿತಿ ಕೆ.ಸಿ.ಸಚ್ಚಿದಾನಂದ್ ರವರು ಕೇರಳ ಸಾಲಿಡಾರಿಟಿ ಹಮ್ಮಿಕೊಂಡಿದ್ದ ‘ಹಾದಿಯಾ-ಪೌರಹಕ್ಕುಗಳ ಅಕ್ರಂದನ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಫ್ರೌಡಾವಸ್ಥೆಗೆ ಬಂದ ಯುವತಿ ಸ್ವಇಚ್ಚೆಯಾಗಿ ವಿವಾಹವಾಗಿರುವುದನ್ನು ನ್ಯಾಯಾಲಯ ಅಮಾನ್ಯಗೊಳಿಸಿದ್ದು ಯಾವ ಕಾನೂನಿನ ಆಧಾರದಲ್ಲಿ ಎಂದು ಪ್ರಶ್ನಿಸಿದ್ದಾರೆ.
ಕುಟುಂಬದೊಳಗಿನ ಹಿಂಸೆಯೂ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುತ್ತದೆ. ಮಹಿಳಾ ವಿರೋಧಿ ಮತ್ತು ಇಸ್ಲಾಂ ವಿರೋಧಿ ಪೂರ್ವಗ್ರಹ ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಇ.ಟಿ. ಮುಹಮ್ಮದ್ ಬಶೀರ್, ಹಾದಿಯಾಳ ಅಭಿಪ್ರಾಯವನ್ನು ಆಲಿಸಲು ನ್ಯಾಯಾಲಯವು ಯಾಕೆ ಮುತುವರ್ಜಿ ತೋರಿಸಿಲ್ಲ ಮತ್ತು ನ್ಯಾಯಾಲಯವು ಯುವತಿಯನ್ನು ಮಾತನಾಡದಂತೆ ತಡೆಯನ್ನು ಒಡ್ಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಾಹಿತಿ ಬಿ.ರಾಜೀವನ್ ಮಾತನಾಡುತ್ತಾ, ಹಾದಿಯಾ ಪ್ರಕರಣವು, ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯನ್ನು ನ್ಯಾಯಾಲಯ ಪ್ಯಾಷಿಸಂನ್ನು ಬಳಸಿಕೊಳ್ಳುತ್ತಿರುವ ಕೆಟ್ಟ ಸೂಚನೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭ ಭಾಸುರೇಂದ್ರ ಬಾಬು, ಕೆ.ಬಾಬುರಾಜ್, ಸಿ.ಪಿ. ಜಾನ್ ಮುಂತಾದವರು ಉಪಸ್ಥಿತರಿದ್ದರು.
