ರಾಷ್ಟ್ರೀಯ ಸುದ್ದಿ

ಸ್ವಯಂ ಘೋಷಿತ ದೇವ ಮಾನವನಿಗೆ ದತ್ತುಪುತ್ರಿಯೊಂದಿಗೂ ಅನೈತಿಕ ಸಂಬಂಧ: ಹನಿಪ್ರೀತ್ ಮಾಜಿ ಪತಿ ಬಿಚ್ಚಿಟ್ಟ ಸತ್ಯ

ವರದಿಗಾರ-ಚಂಡೀಗಡ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ, ಆತನ ದತ್ತುಪುತ್ರಿಯೆಂದು ತೋರಿಸಲಾಗುತ್ತಿರುವ ಹನಿಪ್ರೀತ್ ಸಿಂಗ್ ಜೊತೆಯೂ ಅನೈತಿಕ ಸಂಬಂಧವಿತ್ತು ಎಂದು ಹನಿಪ್ರೀತ್ ಸಿಂಗ್ ನ ಮಾಜಿ ಪತಿ ವಿಶ್ವಾಸ ಗುಪ್ತಾ ಹೇಳಿದ್ದಾರೆ.

ವಿಶ್ವಾಸ್ ಗುಪ್ತ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್‍ ಮತ್ತು ಹನಿಪ್ರೀತ್ ಸಿಂಗ್ ಸಂಬಂಧದ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಗುಪ್ತಾ ಅವರ ಕುಟುಂಬ ಡೇರಾ ಸಚ್ಚಾ ಅನುಯಾಯಿಗಳಾಗಿದ್ದರು. ರಾಮ್ ರಹೀಂ ಅವರ ಸಾನಿಧ್ಯದಲ್ಲೇ 2009ರಲ್ಲಿ ಗುಪ್ತಾ ಹನಿಪ್ರೀತ್‍ರನ್ನು ಮದುವೆಯಾಗಿದ್ದರು. ಹರಿಯಾಣದ ಫತೇ‍ಬಾದ್‍ನವರಾಗಿದ್ದ ಹನಿಪ್ರೀತ್‍ರ ಮೂಲ ಹೆಸರು ಪ್ರಿಯಾಂಕಾ ತನೇಜಾ. 2011ರಲ್ಲಿ ಹನಿಪ್ರೀತ್ ಮತ್ತು ಗುಪ್ತಾರಿಂದ ವಿವಾಹ ವಿಚ್ಛೇದನ ಪಡೆದು ದೂರವಾಗಿದ್ದರು.

ಗುರ್ಮೀತ್ ರಾಮ್ ರಹೀಂ ಸಿಂಗ್‍ ತನ್ನ ಖಾಸಗಿ ಮನೆ ಯಲ್ಲಿ ಹನಿಪ್ರೀತ್ ಜೊತೆ ಅನೈತಿಕವಾಗಿ ತೊಡಗಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿಕೊಂಡ ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತ, ಈ ವಿಚಾರವನ್ನು ಬಹಿರಂಗ ಪಡಿಸಿದರೆ ನೀನು ಮತ್ತು ನಿನ್ನ ಕುಟುಂಬವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುರ್ಮೀತ್ ನನಗೆ ಬೆದರಿಕೆಯನ್ನು ಹಾಕಿದ್ದರು ಎಂದು ಹೇಳಿದ್ದಾರೆ.ಇದರ ಬಳಿಕ ನನ್ನ ಮತ್ತು ನನ್ನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ನಮ್ಮನ್ನು ಡೇರಾದಿಂದ ತೆಗೆದುಹಾಕಿದ್ದಾರೆ.

ಯಾವ ಅಪ್ಪ ತನ್ನ ಮಗಳನ್ನು ಒಟ್ಟಿಗೆ ಮಲಗಿಸಲುತ್ತಾನೆ? ಎಂದು ಪ್ರಶ್ನಿಸಿದ ಗುಪ್ತಾ, ರಾಮ್ ರಹೀಮ್ ಆಕೆಯನ್ನು ತನ್ನ ಜೊತೆಗೆ ಮಲಗಿಸುತ್ತಿದ್ದ. ಆಕೆ ಯಾವತ್ತೂ ನನ್ನೊಂದಿಗೆ ಮಲಗುತ್ತಿರಲಿಲ್ಲ. ಹಾಗೂ ಪ್ರತಿ ರಾತ್ರಿ ಆಕೆ ಮಲಗುತ್ತಿದ್ದದ್ದು ರಾಮ್ ರಹೀಮ್ ಜೊತೆ. ಆಕೆಯೊಂದಿಗೆ ನಾನು ಜತೆಯಾಗದಂತೆ ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಮ್ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group