ವರದಿಗಾರ : ಬೈಕ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು ಅಸಭ್ಯತೆಯಿಂದ ವರ್ತಿಸುವುದೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣವೆಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದ ಸಂಸದ ಸಾಕ್ಷಿ ಮಹಾರಾಜ್’ನ ಜನ್ಮ ಜಾಲಾಡಿ ಬಿಟ್ಟಿದ್ದಾರೆ ಟ್ವಿಟ್ಟರಿಗರು. ಖುದ್ದು ಎರಡು ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಾಕ್ಷಿ ಮಹಾರಾಜ್’ಗೆ ಈ ಕುರಿತು ಮಾತನಾಡುವ ಯಾವುದೇ ನೈತಿಕತೆ ಉಳಿದಿಲ್ಲವೆಂದು ಟ್ವಿಟ್ಟರಿಗರು ಹೇಳಿದ್ದಾರೆ.
ಅದರಲ್ಲೂ @ALIstrap ಎನ್ನುವ ಖಾತೆದಾರನಂತೂ ಸಾಕ್ಷಿ ಮಹಾರಾಜ್’ನ ಹಳೆಯ ಎಲ್ಲಾ ಅಪರಾಧ ಕೃತ್ಯಗಳನ್ನು ಒಂದೊಂದಾಗಿ ಟ್ವೀಟ್ ಮಾಡಿದ್ದಾನೆ. ಅಪ್ಪುಗೆ ಅತ್ಯಾಚಾರಕ್ಕೆ ಕಾರಣವಾಗಿತ್ತದೆಯೆನ್ನುವ ಈ ಸಾಕ್ಷಿ ಮಹಾರಾಜ್ ಯಾರೆಂದು ನಾವೊಮ್ಮೆ ನೋಡೋಣ ಎಂದೆನ್ನುತ್ತಾ ತನ್ನ ಟ್ವೀಟ್ ಆರಂಭಿಸಿದ ಆತ, ಮುಂದುವರೆಸುತ್ತಾ ಸಾಕ್ಷಿ ಮಹಾರಾಜ್ 1992 ರಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. 2000 ದಲ್ಲಿ ಉತ್ತರ ಪ್ರದೇಶದ ಈಟಾ ನಗರದ ಕಾಲೇಜು ಪ್ರಿನ್ಸಿಪಾಲ್ ಇದೇ ಸಾಕ್ಷಿ ಮಹಾರಾಜ್ ತನ್ನ ಸೋದರಳಿಯಂದಿರಾದ ಪದಂ ಸಿಂಗ್ ಮತ್ತು ಶಿವರಾಂ ಜೊತೆಗೂಡಿ ತನ್ನ ಸಾಮೂಹಿಕ ಆತ್ಯಾಚಾರ ಮಾಡಿದ್ದಾರೆ ಎಂದು ಕೇಸು ಕೊಟ್ಟಿದ್ದಳು. 2013 ರಲ್ಲಿ ಸೂಕ್ತ ಸಾಕ್ಷಿಗಳ ಕೊರತೆಯಿಂದ ಇವರನ್ನು ಖುಲಾಸೆಗೊಳಿಸಲಾಯಿತು. 2016ರಲ್ಲಿ ಸುಜಾತ ವರ್ಮಾ ಎನ್ನುವ ಮಹಿಳೆಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು ಈ ಸಾಕ್ಷಿ ಮಹಾರಾಜ್ ಎಂದು ತನ್ನ ಟ್ವೀಟ್ ಮುಂದುವರೆಸುತ್ತಾನೆ. 2005 ರಲ್ಲಿ ಸ್ಟಾರ್ ಟಿವಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಾಕ್ಷಿ ಮಹಾರಾಜ್ ತನ್ನ ಸಂಸದರ ನಿಧಿಯಲ್ಲಿ ನಡೆಸಿದ್ದ ಭ್ರಷ್ಟಾಚಾರ ಮತ್ತು ನಿಧಿ ದುರ್ಬಳಕೆಗೆ ಸಂಬಂಧಿಸಿದಂತೆ ಅವರನ್ನು 2006, ಮಾರ್ಚ್ 21ರಂದು ರಾಜ್ಯಸಭೆ ಸದಸ್ಯತ್ವದಿಂದ ಉಚ್ಚಾಟನೆಗೊಳಿಸಿತ್ತು ಎಂದಿದ್ದಾನೆ. ಭ್ರಷ್ಟ ರಾಜಕಾರಣಿಗಳಿಂದ ತುಂಬಿರುವ ರಾಜ್ಯಸಭೆಯಿಂದ ಭ್ರಷ್ಟಾಚಾರದ ಆರೋಪದಲ್ಲಿ ಇವರನ್ನು ಹೊರದಬ್ಬಲಾಯಿತೆಂದರೆ ಅದೆಷ್ಟು ಭ್ರಷ್ಟರಾಗಿರಬಹುದು.
ಇಷ್ಟೆಲ್ಲಾ ಆರೋಪಗಳಿದ್ದರೂ ಈತ 2014 ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಪಕ್ಷದಿಂದ ಗೆದ್ದು ಬಂದು ಮತ್ತೊಮ್ಮೆ ಸಂಸದನಾಗುತ್ತಾರೆ, ಇದು ಮೋದಿಯವರ ‘ಕನಸಿನ ತಂಡ’ ಎಂದೂ ಆತ ಲೇವಡಿ ಮಾಡಿದ್ದಾನೆ. ಇತರೆ ಟ್ವಿಟ್ಟರಿಗರೂ ಕೂಡ ಇದೇ ಧಾಟಿಯಲ್ಲಿ ಸಾಕ್ಷಿ ಮಹಾರಾಜ್’ನ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ.
So Sakshi Maharaj thinks couples hugging in public leads to rape does he? So let’s break it down. Who is this Sakshi Maharaj?
— Do You Even Lift Bro (@AListRap) September 21, 2017
