ರಾಷ್ಟ್ರೀಯ ಸುದ್ದಿ

ನೈತಿಕ ಪೊಲೀಸ್’ಗಿರಿ: ಯುವತಿಗೆ ಕಪಾಳ ಮೋಕ್ಷ ಮಾಡಿದ್ದ ಬಿಜೆಪಿ ನಾಯಕಿಯಿಂದ ಕೃತ್ಯದ ಸಮರ್ಥನೆ

ವರದಿಗಾರ :  ಮುಸ್ಲಿಂ ಗೆಳೆಯನೊಂದಿಗೆ ಟೀ ಕುಡಿಯುತ್ತಿದ್ದನೆಂಬ ಕಾರಣಕ್ಕೆ ಆಕೆಗೆ ಕಪಾಳ ಮೋಕ್ಷ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ನಾಯಕಿ ತನ್ನ ಕ್ರಿಮಿನಲ್ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ. ಉತ್ತರ ಪ್ರದೇಶ ಪೊಲಿಸರು ಬಿಜೆಪಿ ನಾಯಕಿಯ ಮೇಲೆ ಪ್ರಕರಣ ದಾಖಲಿಸದೆ, ಯುವತಿಯ ಮುಸ್ಲಿಂ ಗೆಳೆಯನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅಲಿಗಢದ ಯುವತಿಯೋರ್ವಳು ತನ್ನ ಮುಸ್ಲಿಂ ಗೆಳೆಯನೊಂದಿಗೆ ಇದ್ದದ್ದನ್ನು ಪ್ರಶ್ನಿಸಿದ ಅಲಿಘಢದ ಬಿಜೆಪಿ ಮಹಿಳಾ ಘಟಕದ ನಾಯಕಿ ಸಂಗೀತಾ ವಾರ್ಶ್ನೆ , ಎಲ್ಲರೆದುರೇ ಆ ಯುವತಿಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಳು. ನಂತರ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಆ ಯುವಕನ ಮೇಲೆ ಕೇಸು ದಾಖಲಾಗುವಂತೆ ಮಾಡಿದ್ದಳು. ಹಿಂದೂ ಸಹೋದರಿಯರು ಮುಸ್ಲಿಂ ಯುವಕರೊಂದಿಗೆ ಇರುವುದನ್ನು ನಮಗೆ ಸಹಿಸಲಾಗುವುದಿಲ್ಲ, ಆದ್ದರಿಂದ ಆಕೆಯನ್ನು ಕೂರಿಸಿ ‘ಬುದ್ಧಿವಾದ’ ಹೇಳಿದ್ದೇನೆ ಎಂದು ಸಂಗೀತಾ ಹೇಳಿದ್ದಾಳೆ. ನನ್ನ ಸಮಸ್ಯೆ ಮುಸ್ಲಿಂ ಮತ್ತು ಹಿಂದೂಗಳ ಸ್ನೇಹವಾಗಿದೆ ಎಂದವಳು ಈ ವೇಳೆ ತಿಳಿಸಿದ್ದಳು.

ಯುವಕ ಯುವತಿಯರು ಅವರವರ ಇಚ್ಚೆ ಪ್ರಕಾರ ಗೆಳೆತನ ಮಾಡಬಾರದೇ ಎಂಬ ಪತ್ರಕರ್ತರ ಪ್ರಶ್ನೆಗೆ, ಅದು ಹಿಂದೂ-ಮುಸ್ಲಿಂ ಆಗಿರಬಾರದು. ಅದಕ್ಕೆ ನಮ್ಮ ವಿರೋಧವಿದೆ. ನಮ್ಮ ಹಿಂದೂ ಹುಡುಗಿಯರಿಗೆ ಅದೆಷ್ಟೋ ಹಿಂದೂ ಹುಡುಗರಿದ್ದಾರೆ ಗೆಳೆತನ ಮಾಡಲು, ಆದರೆ ಮುಸ್ಲಿಮರೊಂದಿಗೆ ಬೇಡ ಎಂದು ಉತ್ತರಿಸಿದಳು.

https://www.youtube.com/watch?v=3SPRKrDnMUQ

 

ಯುವತಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ

https://www.youtube.com/watch?v=sTbv_InxoS8

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group