ಜಿಲ್ಲಾ ಸುದ್ದಿ

ವಿಚಾರವಾದಿಗಳು ಹಾಗೂ ಪತ್ರಕರ್ತರ ಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ‘ಲೇಖನಿ ರಕ್ಷಿಸಿ’ ಚಳುವಳಿ

ವರದಿಗಾರ ಕಾರಟಗಿ :  ಪತ್ರಕರ್ತರು, ಸಾಹಿತಿಗಳು, ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಸಮಾನಮನಸ್ಕರು ಪೆನ್ನು ಹಿಡಿದು ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸುವಂತೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸಿ ಜನಪರ ಚಿಂತನೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು. ಹಂತಕರನ್ನು ಬಂಧಿಸುವ ಜತೆಗೆ ವಿಚಾರವಾದಿಗಳ ಸಾವನ್ನು ಸಂಭ್ರಮಿಸುತ್ತಿರುವ ಕೊಲೆಗಡುಕ ಮನಸ್ಸುಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿದರು.

ಸಮಾಜ ವಿಜ್ಞಾನ  ಅಧ್ಯಯನ ಸಂಸ್ಥೆ, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜನಶಕ್ತಿ, ಕರ್ನಾಟವಿದ್ಯಾರ್ಥಿ ಸಂಘಟನೆ, ಮಾನವ ಭಂದುತ್ವ ವೇದಿಕೆ, ದಲಿತ-ದಮನಿತರ ವೇದಿಕೆಯಿಂದ ಈ ‘ಲೇಖನಿ ರಕ್ಷಿಸಿ’ ಚಳುವಳಿಯನ್ನು ನಡೆಸಲಾಯಿತು.

ವಿಶೇಷ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಪೆನ್ ಜತೆಗೆ ಮನವಿಪತ್ರ ಸಲ್ಲಿಸಲಾಯಿತು. ಚಳುವಳಿಯಲ್ಲಿ ಲೇಖಕರಾದ ಬಿ.ಪೀರ್ ಬಾಷ, ಉಪನ್ಯಾಸಕರಾದ ಹನುಮಂತಪ್ಪ ಚಂದಲಾಪುರ, ಎಚ್.ನಾಗರಾಜ, ಅನಸೂಯಾ ಮರಳಿ, ಮಾನವ ಭಂದುತ್ವ ವೇದಿಕೆಯ ವೀರೇಶ ನವಲಿ, ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಕೆ.ಮಲ್ಲಿಕಾರ್ಜುನ, ಅಧ್ಯಕ್ಷ ಎಚ್.ಚಾಂದ್ ಸಿಂಗ್ ರಜಪೂತ್, ಪತ್ರಕರ್ತರಾದ ಉಮೇಶ್, ಬಸವರಾಜ ತೊಂಡಿಹಾಳ, ವೀರಭದ್ರಪ್ಪ, ನರೇಂದ್ರ, ಪಂಪಾರಡ್ಡಿ ಅರಳಹಳ್ಳಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಶರಣಬಸವ, ಗುರುಬಸವ, ನಾಗರಾಜ, ಮರಿಸ್ವಾಮಿ ಉಪಸ್ಥಿತರಿದ್ದರು.

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group