ಜಿಲ್ಲಾ ಸುದ್ದಿ

‘ಲೇಖನಿಯನ್ನು ರಕ್ಷಿಸಿ’ : ಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ

ವರದಿಗಾರ ಬೆಂಗಳೂರು :  ಪತ್ರಕರ್ತೆ, ಲೇಖಕಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ “ಪ್ರೊಟೆಕ್ಟ್ ಪೆನ್” ಅಭಿಯಾನದ ಹೆಸರಿನಲ್ಲಿ ಗೃಹ‌ಸಚಿವ‌ ರಾಮಲಿಂಗಾರೆಡ್ಡಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಭಾಕರ್ ಅವರಿಗೆ ಚಿಂತಕ ಚಂದ್ರಶೇಖರ ಪಾಟೀಲ, ಮಂಗಳೂರು ವಿಜಯ, ಚಿಂತಕ ಪ್ರೊ.ಶಿವರಾಮಯ್ಯ ನೇತೃತ್ವದಲ್ಲಿ ಮನವಿ‌‌ ಸಲ್ಲಿಸಲಾಯ್ತು.

ಬರಹಗಾರರು, ಪತ್ರಕರ್ತರು, ಲೇಖಕರು ಭೀತಿಯಲ್ಲಿ ಬದುಕುವಂತೆ ಆಗಿದೆ. ಕೂಡಲೆ ಲೇಖಕಕರ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಒತ್ತಾಯಿಸಲಾಯ್ತು.
ಮನವಿ ಸ್ವೀಕರಿಸಿ ಮಾತನಾಡಿದ‌ ರಾಮಲಿಂಗಾರೆಡ್ಡಿ, ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದೇವೆ, ಶೀಘ್ರದಲ್ಲೇ ಅರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ಶ್ರೀರಾಮ ಸೇನೆಯು ಯುವಕರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಯ್ತು. ಮತ್ತು ಮಂಗಳೂರನಲ್ಲಿ ಜಗದೀಶ್ ಕಾರಂತ್ ಅವರ ‌ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಇದೇ ‌ವೇಳೆ ಎರಡೂ ಜಿಲ್ಲಾ ವರಿಷ್ಠ ರಿಗೆ ಕರೆ ಮಾಡಿದ ಸಚಿವರು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.

ಈ ವೇಳೆ ಬಸವರಾಜ ಸೂಳಿಬಾವಿ, ಪತ್ರಕರ್ತ‌ ಹನುಮಂತ ಹಾಲಗೇರಿ, ಸಂಗಮೇಶ ಮೆಣಸಿನಕಾಯಿ, ನಾಗರಾಜ ಹರಪನಹಳ್ಳಿ, ರುಕ್ಮಿಣಿ ನಾಗಮ್ಮನವರ, ಸತೀಶ್ ಜವರೇಗೌಡ, ಗೋವಿಂದರಾಜ ಬೈಚಗುಪ್ಪೆ ಮತ್ತಿತರರು ಹಾಜರಿದ್ದರು

Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group