ರಾಷ್ಟ್ರೀಯ ಸುದ್ದಿ

ಭಾರತಕ್ಕೆ ಹಿಂತಿರುಗಲು ಮೋದಿ ಸರಕಾರದೊಂದಿಗೆ ‘ಡೀಲ್’ ನಡೆಸುತ್ತಿದ್ದಾನೆಯೇ ದಾವೂದ್ ಇಬ್ರಾಹಿಂ?

ವರದಿಗಾರ ಮುಂಬೈ :  ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಅಧ್ಯಕ್ಷ ರಾಜ್ ಠಾಕ್ರೆ ದೊಡ್ಡ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಅದೆಂದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ,  1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ‘ಮೋಸ್ಟ್ ವಾಂಟೆಡ್’ ಆರೋಪಿ ದಾವೂದ್ ಇಬ್ರಾಹೀಂ ಜೊತೆಗೆ ‘ಡೀಲ್’ ಒಂದನ್ನು ಮಾಡುತ್ತಿದೆ. ಅದರ ಪ್ರಕಾರ ಪಾಕಿಸ್ತಾನದಲ್ಲಿ ಅಡಗಿರುವ ದಾವೂದ್’ನನ್ನು ಶರಣಾಗುವಂತೆ ಅಥವಾ ಬಂಧಿಸುವ ನಾಟಕವನ್ನು ಮಾಡಿ, ಆ ಮೂಲಕ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಅದರ ಭರಪೂರ ಲಾಭ ಪಡೆಯುವ ಹುನ್ನಾರ ಇದಾಗಿದೆಯೆಂದು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಫೇಸ್ಬುಕ್ ಲೈವ್’ನಲ್ಲಿ ಈ ಕುರಿತು ಮಾತನಾಡಿದ ಠಾಕ್ರೆ, ಮೋದಿಯವರ ಈ ‘ಕೊಡು-ಕೊಳ್ಳು’ ಒಪ್ಪಂದ,   ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಾಗಿದೆ ಎಂದಿದ್ದಾರೆ. ದಾವೂದ್ ಭಾರತಕ್ಕೆ ಬರಲು ತಯಾರಾಗಿದ್ದಾನೆ. ಕೇಂದ್ರ ಸರ್ಕಾರ ಇದೀಗಾಗಲೇ ಈ ಕುರಿತೊಂದು ಮಾತುಕತೆ ಆತನೊಂದಿಗೆ ನಡೆಸಿದೆ. ಆತನೀಗ ಅನಾರೋಗ್ಯದಿಂದ ಬಳಲುತ್ತಿರುವುದರಿಂದ  ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಲು ಬಯಸಿದ್ದಾನೆ. ಆತ ಸ್ವ ಇಚ್ಚೆಯಿಂದ ಭಾರತಕ್ಕೆ ಮರಳಲು ತಯಾರಾಗಿದ್ದಾನೆ, ಆದರೆ ಕೇಂದ್ರ ಮಾತ್ರ ಇದರ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದೆ ಎಂದು ಆರೋಪಿಸಿದರು.

ಮೋದಿಯನ್ನೋರ್ವ “ಸುಳ್ಳುಗಾರ” ಎಂದ ಠಾಕ್ರೆ, ಅವರು 2002 ರ ಗುಜರಾತ್ ಹತ್ಯಾಕಾಂಡದ ನಂತರ ಹೇಗೆ ತನ್ನನ್ನು ಸಮರ್ಥಿಸಿಕೊಂಡರು ಎಂಬುವುದನ್ನು ಬೊಟ್ಟು ಮಾಡಿದರು. ಮೋದಿಯವರ ‘ಬುಲೆಟ್ ರೈಲು’ ಯೋಜನೆಯನ್ನೂ ಟೀಕಿಸಿದ ಠಾಕ್ರೆ, ಈ ಯೋಜನೆಯನ್ನು ಯಾಕೆ ಕೊಲ್ಕತ್ತದಂತಹ ನಗರಗಳಿಗೆ ಕೊಟ್ಟಿಲ್ಲವೆಂದು ಪ್ರಶ್ನಿಸಿದರು.

ರಾಜ್ ಠಾಕ್ರೆ ಇಂದಷ್ಟೇ ಸಾಮಾಜಿಕ ತಾಣ ಫೇಸ್ಬುಕ್’ನಲ್ಲಿ ತನ್ನ ಖಾತೆ ತೆರೆದಿದ್ದಾರೆನ್ನುವುದು ಗಮನಾರ್ಹ ಸಂಗತಿ. ಮೊದಲ ದಿನವೇ ತನ್ನ ‘ಫೇಸ್ಬುಕ್ ಲೈವ್’ನಲ್ಲಿ ಮೋದಿ ಸರ್ಕಾರದ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group