ವರದಿಗಾರ-ದೆಹಲಿ: ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿದ್ದಾರೆ. ಆದ್ದರಿಂದ ಅವರನ್ನು ವಾಪಸ್ ಕಳುಹಿಸುವುದು ಕಾನೂನು ಉಲ್ಲಂಘನೆಯಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ವಿಶ್ವಸಂಸ್ಥೆಯ 1951ರ ನಿರಾಶ್ರಿತರ ಸಮಾವೇಶದಲ್ಲಿ ರೂಪಿಸಲಾಗಿರುವ ಒಪ್ಪಂದಕ್ಕೆ ಭಾರತವು ಸಹಿ ಮಾಡದ ಕಾರಣ ರೋಹಿಂಗ್ಯಾರನ್ನು ದೇಶದಿಂದ ವಾಪಸ್ ಕಳುಹಿಸುವುದು ಅಪರಾಧವಾಗುವುದಿಲ್ಲ ಮತ್ತು ಕಾನೂನು ಉಲ್ಲಂಘನೆಯಾಗುವುದಿಲ್ಲವೆಂದು ಅವರು ಹೇಳಿದ್ದಾರೆ.
ಅವರು ಮಾನವ ಹಕ್ಕುಗಳ ಆಯೋಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
