ರಾಷ್ಟ್ರೀಯ ಸುದ್ದಿ

ಭಾರತದಲ್ಲಿ ಆರ್ಥಿಕ ಹಿಂಜರಿತ ನಿಜವಾಗಿಯೂ ಇದೆ, ಅದು ತಾಂತ್ರಿಕವಲ್ಲ : ಎಸ್ ಬಿ ಐ

ವರದಿಗಾರ :  ಸೆಪ್ಟಂಬರ್ 2016 ರಿಂದ ಭಾರತದ ಆರ್ಥಿಕತೆಯಲ್ಲಿ ಬಹಳಷ್ಟು ಇಳಿಮುಖ ಕಂಡಿದ್ದು, ಅದೊಂದು ‘ತಾಂತ್ರಿಕ’ ಹಿಂಜರಿಕೆಯಲ್ಲ ಬದಲು ನಿಜವಾಗಿಯೂ ಹಿಂಜರಿಕೆ ಇದೆ ಎಂದು ಎಸ್ ಬಿ ಐ ಇತ್ತೀಚೆಗೆ ನಡೆಸಿದ್ದ ಅಧ್ಯಯನದಿಂದ ಬಹಿರಂಗವಾಗಿದೆ. ಜನರು ಹೆಚ್ಚು ಹೆಚ್ಚು ವ್ಯಯಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಾತ್ರವೇ ಈ ಪತನವನ್ನು ತಡೆಗಟ್ಟಲು ಸಾಧ್ಯವೆಂದು ಸಂಶೋಧನೆ ಬೊಟ್ಟು ಮಾಡಿದೆ.

ಖಂಡಿತವಾಗಿಯೂ ನಾವು ಆರ್ಥಿಕತೆಯ ಮಂದಗತಿಯ ಮಾರ್ಗದಲ್ಲಿದ್ದೇವೆ, ಅದು ಈ ಹಣಕಾಸು ವರ್ಷದ ಮೊದಲ ತ್ರೈಮಾಸಕ್ಕೂ ಮುಂದುವರೆದುಕೊಂಡು ಹೋಯಿತು. ಅದು ದೀರ್ಘ ಕಾಲದ ಇಳಿಮುಖವಾಗಿರಲೂ ಬಹುದೆಂದು  ಬಿಡುಗಡೆಗೊಳಿಸಿದ ಅಧ್ಯಯನ ವರದಿ ಆತಂಕ ವ್ಯಕ್ತಪಡಿಸುತ್ತದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ, ಭಾರತದ ಆರ್ಥಿಕತೆಯ ಇಳಿಮುಖದ ಕುರಿತು ಪ್ರಸ್ತಾಪಿಸುತ್ತಾ, ಪ್ರಸಕ್ತ ಭಾರತದ ಜಿಡಿಪಿ 5.7% ಕ್ಕೆ ಕುಸಿಯಲು ಕಾರಣ ಅದೊಂದು ‘ತಾಂತ್ರಿಕ ಸಮಸ್ಯೆ’ ಎಂದಿದ್ದರು. ಅವರ ಹೇಳಿಕೆಯ ಬೆನ್ನಿಗೇ ಎಸ್ ಬಿ ಐ ನಡೆಸಿದ ಅಧ್ಯಯನ ವರದಿ, ಭಾರತದ ಪ್ರಸಕ್ತ ಆರ್ಥಿಕ ಪರಿಸ್ಥಿಯ ವಾಸ್ತವ ಸ್ಥಿತಿಗತಿಗಳನ್ನು ತೆರೆದಿಡುತ್ತದೆ. ಅಮಿತ್ ಶಾ ಯುಪಿಎ ಅಧಿಕಾರದಲಿದ್ದಾಗ 4.7% ರಲ್ಲಿದ್ದ ಜಿಡಿಪಿಯನ್ನು ನಾವು 7.1% ಕ್ಕೇರಿಸಿದ್ದೆವು ಎಂದೂ ಹೇಳಿದ್ದರು.

ಸದ್ಯದ ವರದಿಯು ವ್ಯಯಿಸುವಿಕೆಯೇ ಇದಕ್ಕಿರುವ ಪರಿಹಾರವೆಂದು ಒತ್ತಿ ಹೇಳಿದೆ. ಸರಕಾರವು ಪ್ರಜ್ಞಾವಂತಿಕೆಯಿಂದ ಹಣಕಾಸಿನ ಕೊರತೆಯನ್ನು ನಿಭಾಯಿಸಬೇಕಾಗಿದೆ ಎಂದು ಅದು ತಿಳಿಸಿದೆ. 2008 ರ ಜಾಗತಿಕ ಆರ್ಥಿಕ ಹಿಂಜರಿತದ ನಂತರ ರೇಟಿಂಗ್ ಸಂಸ್ಥೆಗಳಿಗೆ ಹಣ ನೀಡುವ ಪರಿಪಾಠ ಹೆಚ್ಚಾಗಿರುವ ಕುರಿತೂ ಅದು ಬೆಳಕು ಚೆಲ್ಲಿದೆ. ನಾವು ಈಗ ರೇಟಿಂಗ್’ನ ಹಿಂದೋಡದೆ ನಮ್ಮ ಆರ್ಥಿಕತೆಯನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಏಕೆಂದರೆ ಕಳೆದ 25 ವರ್ಷಗಳಿಂದ ಭಾರತ ಸದೃಢವಾದ ನಿವ್ವಳ ಸುಧಾರಿತ ಆರ್ಥಿಕತೆಯಿಂದ ಕೂಡಿತ್ತು ಎಂಬುವುದನ್ನು ನಾವು ಮರೆಯಬಾರದು ಎಂದು ವರದಿ ಹೇಳಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group