ವರದಿಗಾರ ವಿಶೇಷ

​ಕೇಂದ್ರ ಸರಕಾರದ ವಿಫಲತೆ ; ಸಂಘಪರಿವಾರಕ್ಕೂ ತಟ್ಟಿತೇ ಬಿಸಿ?? 

ವರದಿಗಾರ ವಿಶೇಷ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯ ಹೊರತಾಗಿಯೂ ಸರಕಾರದ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕ ಚಿತ್ತಸ್ಥಿತಿಯ ಬದಲಾವಣೆಗಳ ವಿಶ್ವಾಸಾರ್ಹ ಚಿಹ್ನೆಗಳ ಬಗ್ಗೆ ಆರೆಸ್ಸೆಸ್ ಬಿಜೆಪಿಯನ್ನು ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ಸಂಘಟನೆಗಳ ಪ್ರತಿಕ್ರಿಯೆಯ ಆಧಾರದ ಮೇಲೆ, ಆರೆಸ್ಸೆಸ್ ಆರ್ಥಿಕ ಕುಸಿತ, ಉದ್ಯೋಗ ನಷ್ಟಗಳು ಮತ್ತು ನಿರಾಶಾದಾಯಕ ಉದ್ಯೋಗ ಸೃಷ್ಟಿ, ತಕ್ಷಣದ ಫಲಿತಾಂಶಗಳನ್ನು ತೋರಿಸುವಲ್ಲಿ ನೋಟ್ ರದ್ಧತಿ ವಿಫಲತೆ ಹಾಗು ರೈತರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರದ ವೈಫಲ್ಯತೆಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಿರುವ ಸಾಮಾನ್ಯ ಜನರು ಗಂಭೀರ ಹಾಗೂ ಖುಷಿಕರವಲ್ಲದ ಸವಾಲುಗಳನ್ನೆಸೆಯುತ್ತಿದ್ದಾರೆ ಎಂದು ಆರೆಸ್ಸೆಸ್ ಆಡಳಿತದಲ್ಲಿರುವವರಿಗೆ ತಿಳಿಸಿದೆ.

ಮೋದಿ ಜನಪ್ರಿಯವಾಗಿದ್ದರೂ ಚುನಾವಣಾ ವಿಜಯವನ್ನು ಖಾತರಿಪಡಿಸಬಾರದು ಎಂದು ಸರ್ಕಾರಕ್ಕೆ ತಿಳಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ವೈಯಕ್ತಿಕ ಜನಪ್ರಿಯತೆ ಹಾಗೂ ‘ಭಾರತವು ಪ್ರಕಾಶಿಸುತ್ತಿದೆ’ ಪ್ರಚಾರದ  ಹೊರತಾಗಿಯೂ 2004 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತು ಎಂದು ನಾವು ನೆನಪಿಸಿಕೊಳ್ಳಬೇಕು ಎನ್ನುವುದು ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಮನದ ಮಾತು.

ಆರೆಸ್ಸೆಸ್ ಮುಖಂಡರು ಇತ್ತೀಚೆಗೆ ಮಥುರಾದಲ್ಲಿ ಮೂರು ದಿನಗಳ ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಸಂಘ ಪರಿವಾರದ ವಿವಿಧ ಸಂಘಟನೆಗಳ ಅಧ್ಯಯನ ವರದಿಗಳ ಬಗ್ಗೆ ಚರ್ಚಿಸಲಾಯಿತು.  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೆಸ್ಸೆಸ್ ನಾಯಕರ ಅಭಿಪ್ರಾಯಗಳನ್ನು ಆಲಿಸಿದರು.

ಮೂಲಗಳ ಪ್ರಕಾರ, ಸಂಘಪರಿವಾರದ ಮುಂಚೂಣಿ ಸಂಘಟನೆಗಳು ಸರ್ಕಾರದ ಆರ್ಥಿಕ ಕಾರ್ಯಕ್ಷಮತೆಯನ್ನು ತೀವ್ರವಾಗಿ ಟೀಕಿಸಿವೆ ಹಾಗೂ ಸಾಮಾನ್ಯ ಜನರು ತಿರುಗಿ ಬೀಳುತ್ತಿದ್ದಾರೆ ಎಂದಿವೆ.

ನೋಟ್ ರದ್ಧತಿ ಮುಖಾಂತರ ಸುಮಾರು ಕಪ್ಪು ಹಣ ಹೊರಬರಬಹುದೆಂದೂ,ಇದರಿಂದಾಗಿ ತಮಗೆ ಪ್ರಯೋಜನವಾಗಬಹುದೆಂದೂ ಸಾಮಾನ್ಯ ಜನರು ನಂಬಿದ್ದರು, ಇದೀಗ ತಮ್ಮನ್ನು ಮೋಸ ಮಾಡಲಾಗಿದೆ ಎಂದು ಜನರಿಗೆ ಅರಿವಾಗಿದೆ ಎಂದು ಆರೆಸ್ಸೆಸ್ ಮುಖಂಡರೋರ್ವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬೆಳವಣಿಗೆಗಳನ್ನು ಗಮನಿಸಿ ಸಂಘಪರಿವಾರವು, ತನ್ನ ಮುಂಚೂಣಿ ಸಂಘಟನೆಗಳಿಗೆ, ಕೇಂದ್ರ ಸರಕಾರಕ್ಕೆ ವಿರುದ್ಧವಾಗಿದ್ದರೂ ಜನಪರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಕೇಳಿಕೊಂಡಿದೆ.

ಈ ಹಿನ್ನಲೆಯಲ್ಲಿ ಸಂಘಪರಿವಾರದ ಕಾರ್ಮಿಕ ವಿಭಾಗ, ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ಬೇಡಿಕೆಗಳೊಂದಿಗೆ ನವೆಂಬರ್ 17 ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

2015ರಲ್ಲಿ ಇದೇ ರೀತಿ ಪ್ರತಿಭಟನೆಗೆ ಕರೆ ನೀಡಿದ್ದ ಬಿಎಂಎಸ್,  ಕೊನೆ ಘಳಿಗೆಯಲ್ಲಿ ಪ್ರತಿಭಟನಾ ಕರೆಯನ್ನು ಹಿಂತೆಗೆದುಕೊಂಡಿತ್ತು. ಬಿಎಂಎಸ್ ತನ್ನ ‘ಸ್ವಂತ ಸರಕಾರ’ವನ್ನು ಮುಜುಗರಗೊಳಿಸಲು ಬಯಸಲಿಲ್ಲ. ಆದರೆ,  ಇದೀಗ ಮತ್ತೆ ಬಿಎಂಎಸ್ ಸರಕಾರದ ವಿರುದ್ಧ ಬೀದಿಗಿಳಿಯಲು ತೀರ್ಮಾನಿಸಿದೆ.

ಆದರೆ ಕೆಲವರು ಇದನ್ನು, ವಿರೋಧ ಪಕ್ಷಗಳ ಕಾರ್ಮಿಕ ಸಂಘಟನೆಗಳು ಕಾರ್ಮಿಕ ವರ್ಗದ ಮಧ್ಯೆ ಸರಕಾರದ ಜನವಿರೋಧಿ ನೀತಿಯನ್ನು ತೋರಿಸಿ ಅವರಲ್ಲಿ ಸರಕಾರದ ವಿರುದ್ಧವಾಗಿರುವಂತಹ ಭಾವನೆಗಳನ್ನು ಎಚ್ಚರಗೊಳಿಸುವುದರ ವಿರುದ್ಧ ಹಣೆದ ಯುದ್ಧ ತಂತ್ರವಾಗಿ ಕಾಣುತ್ತಿದ್ದಾರೆ.

ಕೃಪೆ: The Telegraph India

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group