ವರದಿಗಾರ ಗುವಾಹಟಿ : ರೋಹಿಂಗ್ಯಾ ನಿರಾಶ್ರಿತರ ಪರವಾಗಿ ಫೇಸ್ಬುಕ್ಕಿನಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕಾಗಿ ಪಕ್ಷದಿಂದ ವಜಾಗೊಂಡಿರುವ ಅಸ್ಸಾಂ ಬಿಜೆಪಿ ಯುವ ಮೋರ್ಚಾ ನಾಯಕಿ ಬೆನಝೀರ್ ಅರ್ಫಾನ್, ತನ್ನ ಉಚ್ಚಾಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಿಜೆಪಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗೆ ಕಿಡಿ ಕಾರಿದ್ದಾರೆ. ತನ್ನನ್ನು ಯಾವ ಕಾರಣಕ್ಕಾಗಿ ವಜಾಗೊಳಿಸಿದ್ದಾರೋ ಅದರ ಕುರಿತು ಯಾರೂ ಮುನ್ಸೂಚನೆ ನೀಡಿಲ್ಲ ಮಾತ್ರವಲ್ಲ ಅಧಿಕೃತವಾಗಿ ಯಾವ ಪತ್ರವೂ ನನ್ನ ಕೈಗೆ ಬಂದಿಲ್ಲ. ಅದೂ ಅಲ್ಲದೆ ಉಚ್ಚಾಟನೆಯ ಕುರಿತಾಗಿ ಪಕ್ಷದಿಂದ ಯಾರೂ ನನ್ನ ವಿವರಣೆಯನ್ನೂ ಪಡೆದಿಲ್ಲವೆಂದು ಹೇಳಿದರು. ಬಿಜೆಪಿಯ ಅಧಿಕೃತ ಮೊಬೈಲ್ ನಂಬರಿನಲ್ಲಿ ಬಂದ ಕರೆಯೊಂದು, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ ಬಗ್ಗೆ ಹೇಳಿದರು ಮತ್ತು ಉಚ್ಚಾಟನೆಯ ಪತ್ರದ ಪ್ರತಿಗಾಗಿ ತಮ್ಮ ವಾಟ್ಸಪ್ ನೋಡಬೇಕೆಂದೂ ತಿಳಿಸಲಾಯಿತು ಎಂದಿದ್ದಾರೆ. ಇದೊಂದು ಏಕಪಕ್ಷೀಯ ಕ್ರಮವಾಗಿದೆ ಎಂದು ಬೆನಝೀರ್ ಹೇಳಿದ್ದಾರೆ.
ಒಟ್ಟಿನಲಿ ವಾಟ್ಸಪ್-ಫೇಸ್ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಕಲ್ಯಾಣಕ್ಕಾಗಿ ನಾವು ಮಾತ್ರ ಕೆಲಸ ಮಾಡುವವರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ತನ್ನದೇ ಪಕ್ಷದ ಓರ್ವ ಅಲ್ಪಸಂಖ್ಯಾತ ಮಹಿಳೆಯನ್ನು ಈ ರೀತಿಯಲ್ಲಿ ಪಕ್ಷದಿಂದ ಉಚ್ಚಾಟಿಸಿದ್ದನ್ನು ಸಾಮಾಜಿಕ ತಾಣಗಳಲ್ಲಿ ವ್ಯಂಗ್ಯಭರಿತ ಧಾಟಿಯಲ್ಲಿ ಜನರು ಛೇಡಿಸುತ್ತಿದ್ದಾರೆ. ಕೆಲವು ಪೋಸ್ಟ್’ಗಳಲ್ಲಂತೂ, “ಬೆನಝೀರ್ ಅರ್ಫಾನ್ ಅವರು ಮುಸ್ಲಿಂ ಮಹಿಳೆಯರಿಗೆ ವಾಟ್ಸಪ್ಪಿನಲ್ಲಿ ತಲಾಖ್ ನೀಡುವುದನ್ನು ವಿರೋಧಿಸಿದ ಮೋದಿಯನ್ನು ಬೆಂಬಲಿಸಿ ಬಿಜೆಪಿಗೆ ಸೇರಿದ್ದರು, ಆದರೆ ಅವರನ್ನು ಪಕ್ಷದಿಂದ ವಾಟ್ಸಪ್ ಮೂಲಕಾನೇ ಉಚ್ಚಾಟಿಸಲಾಯಿತು” ಎಂದು ಕುಹಕವಾಡಿದ್ದಾರೆ.
“I Had Joined BJP to fight against Triple Talaq via WhatsApp but got suspended letter via WhatsApp”.(2017) pic.twitter.com/nKxDcMsZVf
— History of India (@RealHistoryPic) September 18, 2017
