ವರದಿಗಾರ-ಚಿಕ್ಕಬಳ್ಳಾಪುರ: ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ರಾಜಕೀಯವಾಗಿ ಡೋಂಗಿ ಮನುಷ್ಯನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದು ಯಡಿಯೂರಪ್ಪ ಅವರು 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸದನದಲ್ಲಿಯೇ ಹೇಳಿದ್ದರು ಮತ್ತು ಅದು ದಾಖಲೆಗಳಲ್ಲಿದೆ. ಯಡಿಯೂರಪ್ಪರಿಗೆ ಸತ್ಯ ಹೇಳುವುದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿ ಇರುವ ರೈತರ ಸಾಲದಲ್ಲಿ 50 ಸಾವಿರ ಮನ್ನಾ ಮಾಡಿದ್ದೇವೆ. ಯಡಿಯೂರಪ್ಪರಿಗೆ ರೈತರ ಪರ ಅಷ್ಟೊಂದು ಕಾಳಜಿಯಿದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ಸಾಲವನ್ನು ಮನ್ನಾ ಮಾಡಿಸಲಿ ಎಂದು ಯಡಿಯೂರಪ್ಪರಿಗೆ ಸವಾಲು ಹಾಕಿದ್ದಾರೆ.
