ರಾಷ್ಟ್ರೀಯ ಸುದ್ದಿ

ಸರಕಾರಿ ಖರ್ಚಿನಲ್ಲಿ ಆರೆಸ್ಸೆಸ್ ಕೇಂದ್ರದ ಅಭಿವೃದ್ಧಿ: ನಾಗ್ಪುರ ನಗರ ಪಾಲಿಕೆಯ ವಿವಾದಾತ್ಮಕ ತೀರ್ಮಾನ

ವರದಿಗಾರ : ಬಿಜೆಪಿ ನೇತೃತ್ವದ ನಾಗ್ಪುರ ಮಹಾನಗರ ಪಾಲಿಕೆಯ (ನಾಗ್ಪುರ್ ಮುನ್ಸಿಪಲ್ ಕಾರ್ಪೋರೇಶನ್ – ಎನ್ಎಂಸಿ) ಸ್ಥಾಯಿ ಸಮಿತಿಯು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಎಸ್ಪಿ ಆಕ್ಷೇಪಗಳನ್ನು ಕಡೆಗಣಿಸಿ ಆರೆಸ್ಸೆಸಿನ ಸ್ಮೃತಿ ಮಂದಿರದ ಆವರಣದಲ್ಲಿ ಸೌಂದರ್ಯವರ್ಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಸಮಿತಿ ಮಂಡಿಸಿದ ಪ್ರಸ್ತಾಪವನ್ನು ಮಂಗಳವಾರ ಮಹಾನಗರ ಪಾಲಿಕೆಯ ಸಾಮಾನ್ಯ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿತ್ತು.

“ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಎನ್ಎಂಸಿಯ ವೆಚ್ಚದಲ್ಲಿ ಖಾಸಗಿ ಆವರಣದಲ್ಲಿ ಇಂತಹ ಕೆಲಸಗಳನ್ನು ಕೈಗೊಳ್ಳುವಂತಿಲ್ಲ. ಆದ್ದರಿಂದ, ನಾವು ಇದನ್ನು ವಿರೋಧಿಸಿದ್ದೇವೆ ” ಎಂದು ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ನೇತಾರ ತಾನಾಜಿ ವಾನ್ವೆ ಹೇಳಿದ್ದಾರೆ.

ಆದಾಗ್ಯೂ, ಆಡಳಿತ ಪಕ್ಷದ ನಾಯಕ ಸಂದೀಪ್ ಜೋಶಿ, “ನಾಗಪುರವನ್ನು ಸಂಘಭೂಮಿ ಹಾಗೂ ದೀಕ್ಷಾಭೂಮಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷವೂ ಲಕ್ಷಾಂತರ ಭಕ್ತಾಳುಗಳು ಬರುತ್ತಾರೆ. ಎನ್ಎಂಸಿ ಈ ಹಿಂದೆ ದೀಕ್ಷಾಭೂಮಿ ಹಾಗೂ ಅಣ್ಣಾ ಭಾವು ಸಥೆ ಸ್ಮಾರಕದಲ್ಲಿ ಇಂತಹ ಕಾರ್ಯಗಳನ್ನು ಕೈಗೊಂಡಿದೆ. ಸ್ಮೃತಿ ಮಂದಿರದ ಅಭಿವೃದ್ಧಿ ಕಾರ್ಯವನ್ನು  ಏಕೆ ವಿರೋಧಿಸುತ್ತಿದ್ದಾರೆ? ಬಜೆಟಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಈ ಅಭಿವೃದ್ಧಿ ಕಾರ್ಯವನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ“ ಎಂದು ಹೇಳಿದ್ದಾರೆ.

ಪ್ರವಾಸಿ ಸ್ಥಳಗಳೆಂದು ಘೋಷಿಸಲಾದ ಸ್ಥಳಗಳಲ್ಲಿ ಇಂತಹ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ವಾನ್ವೆ ವಾದಿಸುತ್ತಾರೆ.  ಇದಕ್ಕುತ್ತರಿಸಿದ ಜೋಶಿ “ಕಾನೂನು ಪ್ರವಾಸಿ ಸ್ಥಳಗಳ ಅಭಿವೃದ್ದಿ ಕಾರ್ಯವನ್ನು ಮಾತ್ರ ಅನುಮತಿಸುವುದಾದರೆ, ನಾವು ರಾಜ್ಯ ಸರಕಾರದ ಸಹಾಯದಿಂದ ಆ ಮಾನ್ಯತೆಯನ್ನು ಪಡೆಯುತ್ತೇವೆ” ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರದಲ್ಲಿದೆ.

ಆರೆಸ್ಸೆಸ್ ಸ್ಥಾಪಕರಾದ ಕೆ ಬಿ ಹೆಡ್ಗೆವಾರ್ ಹಾಗೂ ಎಂ ಎಸ್ ಗೋಲ್ವಾಲ್ಕರ್ ಸಮಾಧಿಗಳನ್ನು ಹೊಂದಿರುವ ಸ್ಮೃತಿ ಮಂದಿರವು ಹೇಡ್ಗೆವಾರ್ ಸ್ಮಾರಕ ಸಮಿತಿಯ ಅಧೀನದಲ್ಲಿದೆ. ವಿಶಾಲವಾದ ಮೈದಾನ ಹಾಗೂ ಆಡಿಟೋರಿಯಂಗಳನ್ನು ಹೊಂದಿರುವ ಸ್ಮೃತಿ ಮಂದಿರದಲ್ಲೇ ಆರೆಸ್ಸೆಸ್ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇಲ್ಲಿಗೆ ಭೇಟಿ ನೀಡುವ ಸ್ವಯಂಸೇವಕರ ವಾಸ್ತವ್ಯಕ್ಕಾಗಿ ವಿಶಾಲ ಕಟ್ಟಡವೂ ಇಲ್ಲಿದೆ.

ನಾಗ್ಪುರ ಮಹಾನಗರ ಪಾಲಿಕೆಯು ಆವರಣ ಗೋಡೆ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣವನ್ನು ಕೈಗೊಳ್ಳಲಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group