ವರದಿಗಾರ ದೆಹಲಿ: ನೀವು ಹೆಚ್ಚಾಗಿ ರಿಸರ್ವೇಶನ್ ಕೋಚ್ ಗಳಲ್ಲಿ ಪ್ರಯಾಣ ಮಾಡಿದ್ದರೆ, ಬರ್ತ್’ಗಳಿಗಾಗಿ, ಮಲಗಿ ನಿದ್ರಿಸುವುದಕ್ಕಾಗಿ ನಡೆಯುವ ಜಗಳಗಳನ್ನು ನೋಡಿರಬಹುದು. ಪ್ರಯಾಣಿಕರ ಸುಖ ಪ್ರಯಾಣಕ್ಕಾಗಿ ಹಾಗೂ ಅನವಶ್ಯಕ ಜಗಳಗಳನ್ನು ಇಲ್ಲದಾಗಿಸಲು ಭಾರತೀಯ ರೈಲ್ವೇಯು ನಿದ್ರಿಸಲು ಅಧಿಕೃತವಾಗಿ ಇರುವ ಸಮಯದಿಂದ ಒಂದು ಗಂಟೆ ಕಡಿತಗೊಳಿಸಿದೆ.
ರೈಲ್ವೇ ಇಲಾಖೆಯು ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ ರಿಸರ್ವೇಶನ್ ಕೋಚ್ ಗಳಲ್ಲಿ ಪ್ರಯಾಣಿಕರು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಿದ್ರಿಸಬಹುದು. ಈ ಮೊದಲು ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ನಿದ್ರಿಸಬಹುದಿತ್ತು. ಹೊಸ ಕಾನೂನು ನಿದ್ರೆ ಮಾಡುವ ಸೌಲಭ್ಯವಿರುವ ಎಲ್ಲಾ ರಿಸರ್ವೇಸನ್ ಕೋಚ್ ಗಳಿಗೆ ಅನ್ವಯವಾಗುತ್ತದೆ.
ಸುತ್ತೋಲೆಯು ರೋಗಿಗಳನ್ನು, ಅಂಗವಿಕಲರನ್ನು ಹಾಗೂ ಗರ್ಭಿಣಿ ಮಹಿಳೆಯರನ್ನು ಇದರಿಂದ ಹೊರತು ಪಡಿಸಿದೆ.
