ವರದಿಗಾರ-ಹೈದರಾಬಾದ್: ಭಾರತದಲ್ಲಿ ನೆಲೆಸಿರುವ ವಿವಾದಿತ ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಹೋದರಿಯಾಗುವುದಾದರೇ, ರೋಹಿಂಗ್ಯಾದ ಜನತೆ ಯಾಕೆ ಆಗುವುದಿಲ್ಲವೆಂದು ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶ,ಶ್ರೀಲಂಕಾ, ಪಾಕಿಸ್ತಾನ ಮತ್ತು ಇತರ ದೇಶದ ನಿರಾಶ್ರಿತರು ಭಾರತದಲ್ಲಿರುವಾಗ ರೋಹಿಂಗ್ಯ ನಿರಾಶ್ರಿತ ಜನತೆಗೆ ಯಾಕಿಲ್ಲ ಎಂದು ಅಸಾದುದ್ದೀನ್ ಒವೈಸಿಯು ಭಾರತಕ್ಕೆ ನಿರಾಶ್ರಿತರಾಗಿ ಆಗಮಿಸಿರುವ ರೋಹಿಂಗ್ಯ ಮುಸ್ಲಿಮರನ್ನು ಮಯನ್ಮಾರ್ ಗೆ ತಿರುಗಿ ಕಳುಹಿಸುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರವು ರೋಹಿಂಗ್ಯರನ್ನು ಮುಸ್ಲಿಮರೆಂದು ಪರಿಗಣಿಸದೆ, ನಿರಾಶ್ರಿತರೆಂದು ಪರಿಗಣಿಸಲಿ ಎಂದು ಅವರು ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಭಾರತ ಸರಕಾರವು ರೋಹಿಂಗ್ಯ ಜನತೆಗೆ ಆಶ್ರಯದೊಂದಿಗೆ ಗೌರವಯುತ ಜೀವನ ಹಾಗೂ ಮಕ್ಕಳಿಗೆ ಉತ್ತಮ ಭವಿಷ್ಯದ ವಾತಾವರಣವನ್ನು ನಿರ್ಮಿಸಿಕೊಡಲಿ ಎಂದು ಅವರು ಆಶಿಸಿದ್ದಾರೆ.
