ದೇಶದಲ್ಲೇ ಮೊದಲ ಬಾರಿಗೆ ಅಸ್ಸಾಂ ಸರಕಾರದಿಂದ ಮಹತ್ವದ ನಿರ್ಧಾರ
ವರದಿಗಾರ-ಅಸ್ಸಾಂ: ತಮ್ಮ ಪೋಷಕನ್ನು, ಅಂಗವಿಕಲತೆಯಿಂದ ಬಳಲುತ್ತಿರುವ ಒಡಹುಟ್ಟಿದವರ ಪೋಷಣೆಯನ್ನು ಮಾಡದೇ, ನಿರ್ಲಕ್ಷಿಸುತ್ತಿರುವ ಸರಕಾರಿ ನೌಕರರ ತಿಂಗಳ ವೇತನದಲ್ಲಿ ಶೇ.10 ರಷ್ಟು ಕಟ್ ಮಾಡಲು ಅಸ್ಸಾಂ ಸರಕಾರ ನಿರ್ಧರಿಸಿದೆ ಮತ್ತುಈ ಬಗ್ಗೆ ಮಸೂದೆಯನ್ನು ಅಂಗೀಕರಿಸಲಾಗಿದೆ.
ಮಸೂದೆಯನ್ನು ಮಂಡಿಸಿ ಮಾತನಾಡಿದ ಸಚಿವ ಹಿಮಂತ ಬಿಸ್ವ ಶರ್ಮಾ, ಮಕ್ಕಳು ತಮ್ಮ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅವರು ವೃದ್ಧಾಶ್ರಮಗಳಲ್ಲಿ ಜೀವನ ಸಾಗಿಸುವಂತಾಗಿದೆ ಅದಕ್ಕಾಗಿ ಈ ಮಸೂದೆಯನ್ನು ಜಾರಿಗೆಗೊಳಿಸಲಾಗಿದೆ ಎಂದಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ಅಸ್ಸಾಂ ಸರಕಾರದಿಂದ ಮಹತ್ವದ ನಿರ್ಧಾರ ಎನ್ನಲಾಗಿದೆ. ಹೀಗೆ ಕಡಿತ ಮಾಡುವ ಹಣವನ್ನು ಜೀವನ ನಿರ್ವಹಣೆಗಾಗಿ ಆಯಾ ನೌಕರರ ಪೋಷಕರು ಮತ್ತು ಅಂಗವಿಕಲ ಒಡಹುಟ್ಟಿದವರಿಗೆ ನೀಡಲಾಗುತ್ತದೆ ಎಂದು ಮೂಲ ವರದಿಗಳು ತಿಳಿಸಿವೆ. ಮಸೂದೆಯನ್ನು ಜಾರಿಗೆಗೊಳಿಸುವ ಇಂತಹ ಪ್ರಕ್ರಿಯೆಗಳು ನಮ್ಮ ಸಮಾಜದಲ್ಲಿ ಎದುರಾಗಿದ್ದು ಮಾತ್ರ ಖೇಧಕರ.
