ವರದಿಗಾರ-ಬೆಳಗಾವಿ: ಪೊಲೀಸರ ಬೇಜವಾಬ್ದಾರಿ ಮತ್ತು ಅತಿರೇಕದ ವರ್ತನೆಯಿಂದ ಕೋಪಗೊಂಡ ಪ್ರಯಾಣಿಕರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ಘಟನೆಯಯ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ನಾಗನೂರ ಪಟ್ಟಣದಿಂದ ವರದಿಯಾಗಿದೆ.
ಸಾರ್ವಜನಿಕರಿಂದ ಹೊಡೆತ ತಿಂದಿರುವ ಪೊಲೀಸರು ಗೋಕಾಕದಿಂದ ಬರುತ್ತಿದ್ದ ಕಾರುಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡ್ತಿದ್ದರು ಎನ್ನಲಾಗಿದೆ.
ದಾಖಲೆ ಪತ್ರಗಳೆಲ್ಲವೂ ಸರಿಯಿದ್ದು, ಯಾಕೆ ಹಣ ನೀಡಬೇಕೆಂದು ಚಾಲಕ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಇದೇ ಸಂದರ್ಭ ಚಾಲಕನ ಜೊತೆಗಿದ್ದ ತಾಯಿ ‘ಎಲ್ಲಾ ಸರಿಯಿದ್ದು, ಹಣ ಯಾಕೆ ಕೊಡಬೇಕು’ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಪ್ರಶ್ನೆಯಿಂದ ಕೋಪಗೊಂಡ ಪೊಲೀಸ್ ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭ ಚಾಲಕ ವಿನಯದ ಮಾತಿನಿಂದ ‘ಸರ್ ಇದೆಲ್ಲಾ ಸರಿಯಲ್ಲ’ ಅಂದಿದ್ದಾರೆ. ಅಷ್ಟೇ ಹೇಳಿದ್ದು ಪೊಲೀಸರು ಚಾಲಕನ ಮೇಲೆ ಹಲ್ಲೆಗೆ ಮುಂದಾದರು. ಮಗನ ಮೇಲೆ ಪೊಲೀಸ್ ದೌರ್ಜನ್ಯವನ್ನು ನೋಡಿ ಸಹಿಸದ ಚಾಲಕನ ತಾಯಿ ಪೊಲೀಸರಿಗೆ ಓಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಎಸ್.ಐ ಹೊಸಮನಿ ಹಾಗೂ ಒಬ್ಬ ಪೊಲೀಸ್ ಪೇದೆಗೆ ಹೊಡೆತ ಬಿದ್ದಿದೆ.
ಇದೇ ಸಂದರ್ಭ ವಿಡಿಯೋ ಮಾಡುತ್ತಿದ್ದವರನ್ನು ತಡೆಯುತ್ತಿದ್ದರು.
