ಮಾಹಿತಿ

ಶ್ವಾಸಕೋಶಗಳ ಕ್ಯಾನ್ಸರ್ (ಉಪಯುಕ್ತ ಮಾಹಿತಿ)

ಶ್ವಾಸಕೋಶಗಳ ಕ್ಯಾನ್ಸರ್ ಗೆ (ಉಪಯುಕ್ತ ಮಾಹಿತಿ)
LUNGS CANCER

•ಶ್ವಾಸಕೋಶಗಳು ಉಸಿರಾಟದ ವೇಳೆ ವಾಯುಮಂಡಲದಲ್ಲಿರುವ ಆಮ್ಲಜನಕವನ್ನು ಶೇಖರಿಸಿಟ್ಟು ಅದನ್ನು ರಕ್ತಕ್ಕೆ ಒದಗಿಸಿ ಪ್ರಮುಖ ಜೀವಾಧಾರ ಕೆಲಸವನ್ನು ಮಾಡುವ ಅಂಗಾಂಗವಾಗಿದೆ ‘ಶ್ವಾಸಕೋಶ’.

ಶ್ವಾಸಕೋಶಗಳ ಕ್ಯಾನ್ಸರ್: ಪ್ರತೀ ವರ್ಷ ವಿಶ್ವದಾದ್ಯಂತ 1.51 ಮಿಲಿಯನ್ ಜೀವಗಳನ್ನು ಬಲಿಪಡೆಯುವ ಹಾಗೂ ಕ್ಯಾನ್ಸರ್ ಗಳಲ್ಲಿಯೇ ಅತ್ಯಂತ ದೊಡ್ಡ ಕಾಯಿಲೆಯಾಗಿದೆ ಶ್ವಾಸಕೋಶಗಳ ಕ್ಯಾನ್ಸರ್.

2008ರ ಅಂಕಿ ಅಂಶಗಳ ಪ್ರಕಾರ, ಜಗತ್ತಿನಲ್ಲಿ ಸರಿಸುಮಾರು 16 ಲಕ್ಷದಷ್ಟು ಹೊಸ ರೋಗಿಗಳು ಸೃಷ್ಟಿಯಾಗುತ್ತಾರೆ, ಅದರಲ್ಲಿ 13 ಲಕ್ಷದಷ್ಟು ರೋಗಿಗಳು ಮರಣ ಹೊಂದಿರುತ್ತಾರೆ.
ಭಾರತದಲ್ಲಿ ಸುಮಾರು 58 ಸಾವಿರ ರೋಗಗಳು ಪತ್ತೆಯಾಗಿದ್ದು, 51 ಸಾವಿರ ರೋಗಿಗಳು ಸಾವಿಗೀಡಾಗಿದ್ದಾರೆ.

ಶ್ವಾಸಕೋಶದಲ್ಲಿ ಜೀವಕೋಶಗಳ ಅಸಹಜ ಹಾಗೂ ಅನಿಯಂತ್ರಿತ ಬೆಳವಣಿಗೆಗೆ “ಶ್ವಾಸಕೋಶಗಳ ಕ್ಯಾನ್ಸರ್” ಎನ್ನುತ್ತಾರೆ.

ಇದರಲ್ಲಿ ಎರಡು ವಿಧಗಳಿವೆ:

1. ಸಣ್ಣ ಜೀವಕೋಶಗಳ ಕ್ಯಾನ್ಸರ್
[SMALL CELL LUNGS CANCER]
2. ಸಣ್ಣದಲ್ಲದ ಜೀವಕೋಶಗಳ ಕ್ಯಾನ್ಸರ್
[NON SMALL CELL LUNGS CANCER]

ಸಣ್ಣ ಜೀವಕೋಶಗಳ ಕ್ಯಾನ್ಸರ್ ಸೂಕ್ಷ್ಮದರ್ಶಕ ರೋಗವಾಗಿರುತ್ತದೆ. ಧೂಮಪಾನ ಮಾಡದವರಲ್ಲಿ ಈ ರೋಗ ವಿರಳವಾಗಿದೆ. ಇದು ಬಹಳ ವೇಗದಲ್ಲಿ ಬೆಳೆಯುವ ಹಾಗೂ ಹರಡುವ ರೋಗವಾಗಿರುತ್ತದೆ.

ಸಣ್ಣದಲ್ಲದ ಜೀವಕೋಶಗಳ ಕ್ಯಾನ್ಸರ್’ಗಳು ನಿಧಾನವಾಗಿ ಬೆಳೆಯುವ ರೋಗ. ಶ್ವಾಸಕೋಶದ ಸುಮಾರು 80%ರಷ್ಟು ಕ್ಯಾನ್ಸರ್’ಗಳು ಈ ಸಣ್ಣದಲ್ಲದ ಜೀವಕೋಶಗಳಿಂದಾಗಿದೆ.
ಇದು ಧೂಮಪಾನಿಗಳು ಹಾಗೂ ಧೂಮಪಾನಿ ಇಲ್ಲದವರಲ್ಲೂ ಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಕ್ಯಾನ್ಸರ್’ಗೆ ಪ್ರಮುಖ ಕಾರಣಗಳು:

1.ತಂಬಾಕು ಪದಾರ್ಥಗಳು: ಬೀಡಿ, ಸಿಗರೇಟು, ಹುಕ್ಕಗಳ ಮೂಲಕ ತಂಬಾಕುಗಳನ್ನು ಒಳ ತೆಗೆಯುತ್ತಾರೆ. ವೈದ್ಯಕೀಯ ಸಂಶೋಧನೆಯ ಪ್ರಕಾರ ಶ್ವಾಸಕೋಶಗಳ ಕ್ಯಾನ್ಸರ್ ಬಂದಂತಹ ಶೇಕಡಾ 90% ರೋಗಿಗಳು ಧೂಮಪಾನಿಗಳಾಗಿದ್ದರು.
ಅಧೂಮಪಾನಿಗಳಿಗೆ ಹೋಲಿಸಿದರೆ, ಧೂಮಪಾನಿಗಳಲ್ಲಿ ರೋಗ ಬರುವ ಸಾದ್ಯತೆ 20 ಪಟ್ಟು ಹೆಚ್ಚು. ಇದಕ್ಕೆ ಕಾರಣ, ಧೂಮಪಾನವು ದಿನನಿತ್ಯದ ತಂಬಾಕು ಸೇವನೆಯಿಂದ ಶ್ವಾಸಕೋಶಗಳನ್ನು ಶಿಥಿಲಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ಕ್ಯಾನ್ಸರ್ ರೋಗ ಬೆಳೆಯುವುದಕ್ಕೆ ಅನುಕೂಲ ಮಾಡಿ ಕೊಡುತ್ತದೆ.

2.ದ್ವಿತೀಯ ದರ್ಜೆಯ ಧೂಮಪಾನಿಗಳು: ಅಧೂಮಪಾನಿಗಳಿಗೆ ಈ ರೋಗವು ತಗಲುವುದಿಲ್ಲ ಎಂಬ ಗ್ರಹಿಕೆಯು ತಪ್ಪಾಗಿದೆ. ಸುಮಾರು 10 ರಿಂದ15 ಶೇಕಡಾದಷ್ಟು ರೋಗಿಗಳು ಧೂಮಪಾನಿಗಳಾಗಿರುವುದಿಲ್ಲ.

ಪರಿಸರದಲ್ಲಿ ಧೂಮಪಾನ ಮಾಡುವಾಗ ಅವರ ಹತ್ತಿರ ನಿಂತು ಅದರ ಹೊಗೆ ಶ್ವಸಿಸಿದರೆ ಅಪಾಯ ತಪ್ಪಿದ್ದಲ್ಲ. ಇದು ಹೆಚ್ಚಾಗಿ ಧೂಮಪಾನಿ ಗಂಡಂದಿರನ ಹೆಂಡತಿಯರಲ್ಲೂ ಕಾಣಬಹುದು.

ಇತರ ಉದ್ಯೋಗ ಸ್ಥಳಗಳಲ್ಲಿರುವ ರಾಸಾಯನಿಕ ಕಾರಣಗಳು:
→ ಆಸ್ಬೆಸ್ಟೊಸ್ [ASBESTOS]
→ ಅರ್ಸೆನಿಕ್ [ARSENIC]
→ ರಾಡಾನ್ ಗ್ಯಾಸ್ [RADON]
→ ಕ್ಲೋರೋಮಿತೈಲ್ [CHLORO-METHYL] ಮುಂತಾದವುಗಳು..

ಮುಂದುವರಿಯುವುದು…

– ಸಿಂಸಾರ್ ಶಾಹ್ ಹೊಂಬೆಳಕು
ರೇಡಿಯೇಶನ್ ಥೆರಾಪಿ ಟೆಕ್ನಾಲಜೀಸ್ಟ್,

ಫಾಥರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group