ವರದಿಗಾರ : ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಶಿಂಝೋ ಅಬೆಯವರು ನಿನ್ನೆ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತಿನಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನಿಟ್ಟುಕೊಂಡಿದ್ದರು. ಆ ಪ್ರಯುಕ್ತ ಅಹ್ಮದಾಬಾದಿನ ಎಲ್ಲಾ ಕಡೆಗಳಲ್ಲಿ ಭಾರತ ಮತ್ತು ಜಪಾನಿನ ರಾಷ್ಟ್ರ ಧ್ವಜಗಳನ್ನು ಹಾಕಲಾಗಿತ್ತು. ಆದರೆ ನಗರದ ಕೋಬೆ ವೃತ್ತದಲ್ಲಿ ಬಿಜೆಪಿಗರು ಹಾಕಿದ್ದ ಭಾರತದ ತ್ರಿವರ್ಣ ಧ್ವಜಕ್ಕಿಂತಲೂ ಮೇಲ್ಮಟ್ಟದಲ್ಲಿ ಬಿಜೆಪಿ ಪಕ್ಷದ ಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅವಮಾನಿಸಲಾಗಿದೆ. ಈ ಕುರಿತಾಗಿನ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಮಾತು ಮಾತಿಗೂ ರಾಷ್ಟ್ರ ಪ್ರೇಮ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಪುಕಾರೆಬ್ಬಿಸುವ ಬಿಜೆಪಿಯವರೇ ಈ ರೀತಿಯಾಗಿ ರಾಷ್ಟ್ರ ಧ್ವಜಕ್ಕೆ ಅವಮಾನಿಸಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರ ಧ್ವಜ ಸಂಹಿತೆಯ ಪ್ರಕಾರ ಭಾರತದ ತ್ರಿವರ್ಣ ಧ್ವಜಕ್ಕಿಂತ ಮೇಲ್ಮಟ್ಟದಲ್ಲಿ ಇತರೆ ಯಾವುದೇ ಧ್ವಜ ಹಾರಿಸುವಂತಿಲ್ಲ ಎನ್ನುವುದು ಗಮನಾರ್ಹವಾಗಿದೆ.
ವೀಡಿಯೋ ವೀಕ್ಷಿಸಿ
