ಶಿಕ್ಷಕರ ಪ್ರತಿಭಾ ಪರಿಷತ್ ಬೆಳಗಾಂ ಜಿಲ್ಲೆಯ ರಾಯಭಾಗ್ ತಾಲೂಕು ಘಟಕ ಮತ್ತು ಕುಡಚಿ ವಿಭಾಗ ಜಂಟಿಯಾಗಿ “ಶಿಕ್ಷಣ, ಮಾನವೀಯತೆ ಮತ್ತು ಕೋಮುವಾದ” ಎಂಬ ಒಂದು ವಾರದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಮೊಹಮ್ಮದಿಯ ಪ್ರೌಡ ಶಾಲೆ ಕುಡಚಿ , ಅನಸ್ ಉರ್ದು ಪ್ರೌಡಶಾಲೆ ತೇರ್ ದಾಲ್, ಚಿನ್ಮಯ ಪ್ರೌಡಶಾಲೆ ಮೂಡಲಗಿ, ಸರಕಾರಿ ಪ್ರೌಡಶಾಲೆ ಪಾಲಬಾವಿ, ಅಜಿತ್ ಬಾನೆ ಪ್ರೌಡಶಾಲೆ ಕುಡಚಿ ಮತ್ತು ಸರಕಾರಿ ಪ್ರೌಡಶಾಲೆ ಕುಡಚಿಯಲ್ಲಿ ಬಹುಭಾಷ ಸಾಹಿತಿ ಮುಹಮ್ಮದ್ ಬಡ್ಡೂರ್ ರವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಲಕ್ಷ್ಮಣ ಚೌರಿ, ತಾಲೂಕು ಘಟಕ ಅಧ್ಯಕ್ಷ ಶ್ರೀ ಆರ್ ಡಿ ಪಾಟಿಲ್, ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಬಿ ಕ್ಯಾಸ್ತಿ ಮತ್ತು ಕುಡಚಿ ವಿಭಾಗದ ಎಲ್ಲಾ ಶಿಕ್ಷಕರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀಯುತ ಮುಹಮ್ಮದ್ ಬಡ್ಡೂರ್’ರವರಿಗೆ “ಕನ್ನಡ ಕುಲಪುತ್ರ” ಎಂಬ ಬಿರುದು ನೀಡಿ ಗೌರವಿಸಿ, ಸನ್ಮಾನಿಸಲಾಯಿತು
ಶ್ರೀ ಮಹಾಲಿಂಗಯ್ಯ ಸ್ವಾಮಿ ಹಿರೇಮಠ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
