ರಾಷ್ಟ್ರೀಯ ಸುದ್ದಿ

ರೈತರ ಸಾಲದಲ್ಲಿ 19 ಪೈಸೆ ಮನ್ನಾ ಮಾಡಿದ ಯೋಗಿ ಸರಕಾರ

ವರದಿಗಾರ-ಉತ್ತರ ಪ್ರದೇಶ: ಇಲ್ಲಿನ ಬರ್ತಾನ ಎಂಬಲ್ಲಿಯ ಈಶ್ವರ್ ದಯಾಲ್ ಎಂಬ ರೈತನಿಗೆ ಜಿಲ್ಲಾಧಿಕಾರಿಯು ಸಾಲದಲ್ಲಿ 19 ಪೈಸೆಯನ್ನು ಸರಕಾರ ಮನ್ನಿಸಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ಇದು ಕೇವಲ ಈಶ್ವರ್ ದಯಾಲ್ ರ ಕಥೆ ಅಲ್ಲ. ಸಾಲದ ಹೊರೆಯಿಂದ ನಲುಗುತ್ತಿರುವ ಉತ್ತರ ಪ್ರದೇಶದ ಹಲವು ರೈತರಿಗೆ ಇದೇ ಅನುಭವವಾಗಿದೆ. ಸೋಮವಾರದಂದು ಸುಮಾರು ಏಳು ಸಾವಿರ ರೈತರಿಗೆ ಸಾಲ ಮನ್ನಾ ಪ್ರಮಾಣ ಪತ್ರವನ್ನು ವಿತರಿಸಲಾಗಿತ್ತು. 50 ರೈತರ ಮನ್ನಾ ಮೊತ್ತವು 100 ರೂಪಾಯಿಗಿಂತ ಕಡಿಮೆಯಾಗಿದ್ದು, ಸುಮಾರು 200 ರೈತರ ಸಾಲ ಮನ್ನಾ ಮೊತ್ತವು ಸಾವಿರ ರೂಪಾಯಿಗಿಂತಲೂ ಕಡಿಮೆಯಿತ್ತು.

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 1.55 ಲಕ್ಷ ರೂಪಾಯಿಗಳ ಸಾಲವನ್ನು ಹೊಂದಿರುವ ಮುನ್ನೀ ಲಾಲ್ ಸರಕಾರದ ಚುನಾವಣಾ ಪೂರ್ವ ಭರವಸೆಯಂತೆ ಒಂದು ಲಕ್ಷ ರೂಪಾಯಿಯ ಸಾಲ ಮನ್ನಾ ಆಗಬಹುದೆಂದು ಯೋಚಿಸಿದ್ದರು. ಆದರೆ ಇದೀಗ ಜಿಲ್ಲಾಧಿಕಾರಿಯವರು ಮುನ್ನೀ ಲಾಲ್’ರ ಸಾಲದಲ್ಲಿ ರೂ.10.37 ಮನ್ನಾ ಆಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ಚುನಾವಣೆಗೆ ಮೊದಲು ಬಿಜೆಪಿ, ರೈತರ ಸಾಲದಲ್ಲಿ ರೂ.1 ಲಕ್ಷದವರೆಗೆ ಮನ್ನಾ ಮಾಡುವ ಭರವಸೆ ನೀಡಿತ್ತು. ಚುನಾವಣಾ ರಾಲಿಯೊಂದರಲ್ಲಿ ಭಾಷಣ ಮಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಲಮನ್ನಾ ಯೋಜನೆಯಲ್ಲಿ ಉತ್ತರ ಪ್ರದೇಶದ ಸುಮಾರು 86 ಲಕ್ಷ ರೈತರು ಫಲಾನುಭವಿಗಳಾಗುವ ಭರವಸೆ ನೀಡಿದ್ದರು. ಸದ್ಯ ಭರವಸೆಗಳೆಲ್ಲವೂ ಹುಸಿಯಾಗಿದೆ

ಸಣ್ಣ ಸಣ್ಣ ಮೊತ್ತದ ಸಾಲ ಮನ್ನಾ ಮಾಡಿದ ಸರಕಾರದ ಕ್ರಮದ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ರಾಜ್ಯದ ಹಲವು ರೈತರು ಹಲವು ಕಾರಣಗಳಿಂದ ಸಣ್ಣ ಮೊತ್ತವನ್ನು ಮರುಪಾವತಿ ಮಾಡದೇ ಬಿಟ್ಟಿದ್ದರು, ಮೊತ್ತವು ನಗಣ್ಯವಾದರೂ ದಾಖಲೆಗಳ ಪ್ರಕಾರ ಅವರು ಸಾಲಗಾರರಾಗಿದ್ದರು. ಅದಕ್ಕಾಗಿ ಸರಕಾರವು ಅವರ ಸಾಲ ಮನ್ನಾ ಮಾಡಿ ಅವರನ್ನು ಸಾಲಮುಕ್ತಗೊಳಿಸಿದೆ ಎಂದಿದ್ದಾರೆ.

ಅದರೆ ಸರಕಾರ ಸಣ್ಣ ಸಣ್ಣ ಮೊತ್ತದ ಸಾಲ ಮನ್ನಾ ಮಾಡಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿ ತೋರಿಸುವ ಪ್ರಯತ್ನ ಮಾಡುತ್ತಿದೆ ಎನ್ನುವುದು ಆಕ್ರೋಷಿತ ಜನರ ಮಾತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group