ರಾಜ್ಯ ಸುದ್ದಿ

ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ : ಎರಡೂ ಹತ್ಯೆಗಳಿಗೆ ಬಳಸಿದ್ದು ಒಂದೇ ಗನ್!

ವರದಿಗಾರ ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್  ಹತ್ಯೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮಹತ್ವದ ವಿಚಾರವನ್ನು ಹೊರ ಹಾಕಿದೆ. ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದ ಪ್ರೊಫೆಸರ್ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೆ ಬಳಸಲಾದ ಪಿಸ್ತೂಲ್ ಎರಡೂ ಒಂದೇ ಎನ್ನುವ ಆಘಾತಕಾರಿ ವಿಚಾರ ಬಯಲಾಗಿದೆ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯಾ ಸ್ಥಳದಲ್ಲಿ ದೊರೆತ ಬುಲೆಟ್’ಗಳಲ್ಲಿರುವ Ballistic ಗುರುತುಗಳು ಎರಡೂ ಒಂದೇ ಮಾದರಿಯದ್ದಾಗಿದೆಯೆಂದು ತನಿಖಾ ತಂಡ ಪತ್ತೆ ಹಚ್ಚಿದೆ. ಈಗ ಸಂಪೂರ್ಣ ತನಿಖೆ ಫಾರೆನ್ಸಿಕ್ ತಂಡದ ಮೇಲೆ ಅವಲಂಬಿತವಾಗಿದೆಯೆನ್ನಲಾಗಿದೆ.

ತನಿಖಾ ತಂಡ ಗೌರಿ ಮತ್ತು ಕಲ್ಬುರ್ಗಿ ಹತ್ಯೆಯ ಕ್ರಮ ಮತ್ತು ಸನ್ನಿವೇಶಗಳತ್ತನೂ ಬೊಟ್ಟು ಮಾಡಿದೆ. ಕಲ್ಬುರ್ಗಿ ತನ್ನ ಮನೆಯಲ್ಲಿಯೇ ಹತ್ಯೆಯಾಗಿದ್ದರೆ, ಗೌರಿ ತನ್ನ ಮನೆಯ ಹೊರ ಭಾಗದಲ್ಲಿ ಹತ್ಯೆಯಾಗಿದ್ದರು. ವಿಶೇಷ ತನಿಖಾ ತಂಡ ಪನ್ಸಾರೆ ಹತ್ಯಾ ತನಿಖೆ ನಡೆಸುತ್ತಿರುವ ತಂಡವನ್ನು ಮತ್ತು ಮುಂಬೈನ ನರೇಂದ್ರ ದಾಬೋಲ್ಕರ್ ಹತ್ಯೆಯ ತನಿಖೆಯನ್ನು ನಡೆಸುತ್ತಿರುವ ಸಿಬಿಐಯನ್ನು ಸಂಪರ್ಕಿಸಿ ಈ ಕುರಿತಾಗಿನ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವ ಸಾಧ್ಯತೆಯಿದೆಯೆನ್ನಲಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group