ಬೀಜಿಂಗ್: ಚೀನಾದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವನಿಗೆ ಇಸ್ಲಾಮಿನ ಬಗ್ಗೆ ಚರ್ಚೆ ಮಾಡಲು ಆನ್’ಲೈನ್ ವೇದಿಕೆ ನಿರ್ಮಿಸಿದ್ದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಕ್ಸಿಜಿಯಾಂಗ್ ಪ್ರಾಂತ್ಯದ ಹುವಾಂಗ್ ಶಿಕೆ ಯನ್ನು 2016 ರಲ್ಲಿ, ಆತ ಮೆಸ್ಸೇಜಿಂಗ್ ಆಪ್ ‘ವಿ ಚಾಟ್’ (WeChat) ನಲ್ಲಿ ಇಸ್ಲಾಮಿನ ಕುರಿತು ಚರ್ಚಿಸಲು ಗ್ರೂಪ್ ಪ್ರಾರಂಭಿಸಿದ ಮೂರು ತಿಂಗಳ ನಂತರ ಬಂಧಿಸಲಾಗಿತ್ತು. 49ರ ಹರೆಯದ ಹುವಾಂಗ್, ಇಸ್ಲಾಮಿನ ಬಗ್ಗೆ ಚರ್ಚಿಸಲು ಹಾಗೂ ಕುರಾನ್ ಕಲಿಸುವುದಕ್ಕಾಗಿ ಎರಡು ಗುಂಪುಗಳನ್ನು ವಿ ಚಾಟ್’ನಲ್ಲಿ ನಿರ್ವಹಿಸುತ್ತಿದ್ದನು. ಎರಡೂ ಗುಂಪುಗಳಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿದ್ದರು.
ಹುವಾಂಗ್’ನ ಕೃತ್ಯವು ಅನ್’ಲೈನ್ ಮುಖಾಂತರ ಧಾರ್ಮಿಕ ಚರ್ಚೆ ನಡೆಸಬಾರದೆಂಬ ಅಲ್ಲಿನ ಕಾನೂನಿನ ಉಲ್ಲಂಘನೆಯಾಗಿತ್ತು ಎನ್ನಲಾಗಿದೆ.
