ವರದಿಗಾರ-ಲಖ್ನೋ: ಭಾರತದಲ್ಲಿ ಆಶ್ರಯ ಪಡೆದಿರುವ ಸಾವಿರಾರು ರೊಹಿಂಗ್ಯಾ ಜನತೆಯೊಂದಿಗೆ ಅನುಕಂಪ ತೋರಿಸಿ ಮಾನವೀಯ ನೆಲೆಯ ನಿಲುವನ್ನು ತೆಗೆದುಕೊಳ್ಳಬೇಕೆಂದು ಬಿಎಸ್ಪಿ ನಾಯಕಿ ಮಾಯಾವತಿ ಕೇಂದ್ರ ಸರಕಾರವನ್ನು ಕೋರುವ ಮೂಲಕ ಹೃದಯಂವಂತಿಕೆಯನ್ನು ತೋರಿದ್ದಾರೆ.
ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ ಪರಿಹರಿಸಲು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಸರಕಾರ ಮಾತುಕತೆ ನಡೆಸಬೇಕೆಂದು ಅವರು ತನ್ನ ಕೋರಿಕೆಯಲ್ಲಿ ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದಾರೆ.
ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶ ಹಾಗೂ ಭಾರತದ ಕೆಲವು ರಾಜ್ಯಗಳಲ್ಲಿ ಆಶ್ರಯ ಪಡೆದುಗೊಂಡಿದ್ದಾರೆ.ಗಡಿ ರಾಷ್ಟ್ರವಾದ ಮ್ಯಾನ್ಮಾರ್ ನಲ್ಲಿ ಇನ್ನೂ ಶಾಂತಿ ನೆಲೆನಿಂತಿಲ್ಲ. ಇದು ಗೊಂದಲದ ವಾತಾವರಣವೆಂದು ಮಾಯಾವತಿ ಕಳವಳ ವ್ಯಕ್ತಪಡಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸದೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
